ಉದಯವಾಹಿನಿ, ದಾವಣಗೆರೆ:  ದಕ್ಷಿಣದಲ್ಲಿ ಕಾಂಗ್ರೆಸ್ ಸಂಚಲನ ಮೂಡಿಸುತ್ತಿದೆ. ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಕಾಂಗ್ರೆಸ್​ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿಗಳು ಜೊತೆ ಜೊತೆಗೆ ಶಾಮನೂರು ಶಿವಶಂಕರಪ್ಪಾಜಿ ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಮತದಾರ ಕೈ ಹಿಡಿಯಲಿದ್ದಾನೆ ಎಂಬ ನಂಬಿಕೆ ಕಾಂಗ್ರೆಸ್ ಪಕ್ಷದ್ದು. ಈ ಬೈ ಎಲೆಕ್ಷನ್​ನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಡೆದಿದ್ದ ಲೀಡ್​ಗಿಂತ್ ಹೆಚ್ಚು ಲೀಡ್​ನಲ್ಲಿ ಸಮರ್ಥ್‌ ಶಾಮನೂರು ಪಡೆದುಕೊಳ್ಳಲಿದ್ದಾರೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಹೇಗೆಲ್ಲ ಪ್ರಚಾರ ನಡೆಯುತ್ತಿದೆ ಎಂಬುದರ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

ಇದು ಕಾಂಗ್ರೆಸ್ ಭದ್ರಕೋಟೆ; ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಈಟಿವಿ ಭಾರತದ ಜೊತೆ‌ ಮಾತನಾಡಿ, ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ಇಂದು ಶನಿವಾರ, ಗುರುವಾರ ಮತದಾನ ನಡೆಯಲಿದೆ. ಏಪ್ರಿಲ್​ 07ಕ್ಕೆ ಬಹಿರಂಗ ಪ್ರಚಾರ ಕೊನೆಯಾಗಲಿದೆ. ಈಗಾಗಲೇ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಮುಗಿಸಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಸೇರಿದಂತೆ ಶಾಸಕರು ಸಚಿವರು ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ಇದು ಅಪ್ಪಾಜಿ ಅವರ ಕ್ಷೇತ್ರ ಹಾಗೂ ಕಾಂಗ್ರೆಸ್ ಭದ್ರಕೋಟೆ, ಸಮರ್ಥ್ ಮನೆ‌ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಮುಂದಿನ ಯೋಜನೆ ಏನೂ ಎಂಬುದು ಬಗ್ಗೆ ಮತದಾರರು ಗಮನಿಸುತ್ತಿದ್ದಾರೆ. ನಮ್ಮ ಪರವಾಗಿ ಒಳ್ಳೆ ಪ್ರತಿಕ್ರಿಯೆ ಇದೆ ಎಂದರು.

ಕೈಹಿಡಿಯಲಿದೆ ಪಂಚ ಗ್ಯಾರಂಟಿ: ದಾವಣಗೆರೆ ಜಿಲ್ಲೆ ಗ್ಯಾರಂಟಿಗಳ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ.‌ ಮಹಿಳೆಯರು, ಫಲಾನುಭವಿಗಳು ಗ್ಯಾರಂಟಿಗಳಿಂದ ಯಾವ ರೀತಿ ಅನುಕೂಲ ಆಗಿದೆ ಎಂದು ಹೇಳಿದ್ದಾರೆ. ಈ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮ ಯೋಜನೆಯಡಿ ಹಣ ಅವರ ಖಾತೆಗೆ ಹೋಗಲಿದೆ. ಇನ್ನು ದಕ್ಷಿಣದಲ್ಲಿ 58 ಸಾವಿರ ಜನ ಫಲಾನುಭವಿಗಳಿದ್ದಾರೆ. ಈ ಗ್ಯಾರಂಟಿಗಳಿಂದ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲು, ಮನೆ ಬಾಡಿಗೆ ಕಟ್ಟಲು, ಸಾಲದ ಕಂತುಗಳನ್ನು ಕಟ್ಟಲು, ಅನೇಕ ರೀತಿಯಲ್ಲಿ ಬಳಕೆ ಆಗ್ತಿದೆ. ಸರ್ಕಾರ ಗ್ಯಾರಂಟಿ ಕೊಡ್ತಿದೆ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಮಹಿಳೆಯರು ಹೇಳ್ತಿದ್ದಾರೆ ಎಂದು ದಾವಣಗೆರೆ ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!