ಉದಯವಾಹಿನಿ, ಹೈದರಾಬಾದ್: ಮಾಧಾಪುರದ ಮೈಂಡ್‌ಸ್ಪೇಸ್ ಪ್ರದೇಶದಲ್ಲಿ ತಡರಾತ್ರಿ ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸುಮಾರು ಒಂದು ಕಿಲೋಮೀಟರ್ ಎಳೆದೊಯ್ದ ಪರಿಣಾಮ 22 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನಿಯಾ ಆಯೇಷಾ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ಪತಿ ಅಬ್ದುಲ್ ಬಾಸಿತ್ (26) ತೀವ್ರ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿ ಸಿನಿಮಾ ನೋಡಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತವಾಗಿತ್ತು.

ಸ್ಕೂಟಿಗೆ ಟ್ರಕ್‌ ಡಿಕ್ಕಿ ಹೊಡೆದಾಗ ಅಬ್ದುಲ್‌ ಬಾಸಿತ್‌ ರಸ್ತೆಬದಿಗೆ ಹಾರಿಬಿದ್ದಿದ್ದಾರೆ. ಆದರೆ, ಆಯೇಷಾ ಮತ್ತು ಸ್ಕೂಟಿ ವಾಹನದ ಅಡಿಯಲ್ಲಿ ಸಿಲುಕಿಕೊಂಡು ಸುಮಾರು ಒಂದು ಕಿಲೋಮೀಟರ್ ಎಳೆದೊಯ್ಯಲಾಗಿದೆ. ಈ ದೃಶ್ಯವನ್ನು ನೋಡಿದ ವಾಹನ ಸವಾರರು ಟ್ರಕ್ ಅನ್ನು ಬೆನ್ನಟ್ಟಿ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಟ್ರಕ್‌ ನಿಲ್ಲಿಸಿ ಪೊಲೀಸರು ಬರುವ ಮೊದಲೇ ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯ ನಿವಾಸಿಗಳು ಟ್ರಕ್ ಕ್ಲೀನರ್‌ನನ್ನು ಹಿಡಿದು ನಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರ್ನಾಟಕ ನೋಂದಣಿಯ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಕ್ಲೀನರ್ ಪೊಲೀಸ್ ವಶದಲ್ಲಿದ್ದಾನೆ.

Leave a Reply

Your email address will not be published. Required fields are marked *

error: Content is protected !!