ಉದಯವಾಹಿನಿ, ಶಿಮ್ಲಾ: ಮಾಜಿ ಸೈನಿಕನೊಬ್ಬ ತೋಟದಲ್ಲಿ ಪೇರಳೆ ಹಣ್ಣು ಕೀಳುತ್ತಿದ್ದ 4 ವರ್ಷದ ಮಗುವನ್ನು ಹಿಡಿದು ಕೈಕಾಲು ಕಟ್ಟಿಹಾಕಿ ಥಳಿಸಿದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲ್ಲೆ ನಡೆಸಿದ ಜಾಗದ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಹಲ್ಲೆ ನಡೆಸುವ ವೇಳೆ ʻಅಂಕಲ್‌ ನನ್ನನ್ನು ಕಾಪಾಡಿʼ ಎಂದು ಮಗು ಕಣ್ಣಿರಿಟ್ಟಿದೆ. ವಿಷಯ ತಿಳಿದ ಕೆಲವು ಗ್ರಾಮಸ್ಥರು ಸ್ಥಳಕ್ಕೆ ಬಂದು ಮಗುವನ್ನು ರಕ್ಷಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ತುರ್ತು ಸಹಾಯವಾಣಿ 112ಕ್ಕೆ ಕರೆ ಬಂದಿದ್ದು, ಉನಾ ಪೊಲೀಸರ ತಂಡ ಗ್ರಾಮಕ್ಕೆ ತೆರಳಿ ಮಗುವನ್ನು ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರಂಭಿಕ ತನಿಖೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!