ಉದಯವಾಹಿನಿ, ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಜನಗಣತಿ ಆರಂಭಗೊಂಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳುವಂತೆ ಜಿಬಿಎ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸೂಚನೆ ನೀಡಿದ್ದಾರೆ. ಜನಗಣತಿ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.1ರಿಂದ ಏ.15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಲಾಗಿತ್ತು. ಈಗ ಏ.16ರಿಂದ ಮೇ 15ರವರಗೆ ಗಣತಿ ನಡೆಯಲಿದೆ. ಸಾರ್ವಜನಿಕರು ಎಲ್ಲರೂ ಈ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.

23, 705 ಗಣತಿದಾರರು ಇದ್ದಾರೆ. ಮೇಲ್ವಿಚಾರಕರು 2,912 ಜನ ಇದ್ದಾರೆ. 2027ರಲ್ಲಿ ಫೇಸ್ -2 ಗಣತಿ ಆರಂಭವಾಗಲಿದೆ. ಕಡ್ಡಾಯವಾಗಿ ಜನ ಪಾಲ್ಗೊಳ್ಳಬೇಕು. ಮನೆಯ ಮಾಹಿತಿ, ಕುಟುಂಬದ ಬಗ್ಗೆ ಮೂಲಭೂತ ಮಾಹಿತಿ, ಮನೆಯಲ್ಲಿರುವ ಸೌಲಭ್ಯ, ಜೊತೆಗೆ ಟಿವಿ, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಮೊಬೈಲ್ ವಾಹನದ ಬಗ್ಗೆ ವಿವರ ಕೇಳುತ್ತಾರೆ. ಜೊತೆಗೆ ಬಳಸುವ ಮುಖ್ಯ ಧಾನ್ಯದ ಬಗ್ಗೆ ಮಾಹಿತಿ ಕೇಳುತ್ತಾರೆ. ಜನಗಣತಿಯಲ್ಲಿ ಪಾಲ್ಗೊಳ್ಳೋದು ಶಾಸನಬದ್ಧ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಕೊಡದೇ ಇದ್ರೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಆ ಹಂತ ಹೋಗಲಾರದು ಅಂತಾ ಅನ್ಸುತ್ತೆ. ಜನರಿಗೆ ಜವಾಬ್ದಾರಿ ಇದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!