ಉದಯವಾಹಿನಿ, ಬೆಂಗಳೂರು: ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಲಿ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶಾಸಕರು ದೆಹಲಿಗೆ ಹೋಗಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಬೇಕು. ನಾನು ಹಿಂದೆ ಮಂತ್ರಿ ಆಗಿದ್ದಾಗ ಪುನರ್ ರಚನೆ ಆಗಿತ್ತು. ಬೇರೆಯವರಿಗೆ ಸಚಿವ ಸ್ಥಾನ ಸಿಗಬೇಕು. ಪಕ್ಷದ ಹಂತದಲ್ಲಿ ಅದು ಆಗುತ್ತದೆ ಎಂದರು. ಈ ಸಮಯದಲ್ಲಿ ಶಾಸಕರು ಹೋಗಿದ್ದು ಸರಿಯಲ್ಲ ಡಿಸಿಎಂ ಹೇಳಿಕೆ ಬಗ್ಗೆ ನಾನು ಮಾತಾಡಲ್ಲ.ಶಾಸಕರು ಅವರು ಪ್ರಯತ್ನ ಮಾಡೋದು ತಪ್ಪಲ್ಲ. ಮಂತ್ರಿ ಆಗೋಕೆ ಎಲ್ಲರಿಗೂ ಆಸೆ ಇರುತ್ತದೆ. ಯಾರು ಮಂತ್ರಿಯಾಗಿ ಇರಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. 33 ಜನ ಯಾರು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಸಂಸತ್‌ನಲ್ಲಿ ಕ್ಷೇತ್ರ ಮರು ವಿಂಗಡಣೆ ವಿಧೇಯಕ ಮಂಡನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಗಳಲ್ಲಿ ಈಗ ಇರೋ ಲೋಕಸಭೆ ಕ್ಷೇತ್ರಗಳ ಪೈಕಿ 50% ಸೀಟು ಹೆಚ್ಚಳ ಮಾಡಿದ್ರೆ ಯಾವುದೇ ಅನ್ಯಾಯ ಆಗಲ್ಲ. ಮಹಿಳಾ ಮೀಸಲಾತಿ ಕೊಡಲು ಕ್ಷೇತ್ರ ಹೆಚ್ಚು ಮಾಡೋ ಅವಶ್ಯಕತೆ ಇಲ್ಲ. ಎಷ್ಟೇ ಸ್ಥಾನ ಇದ್ದರು 33% ಮೀಸಲು ಕೊಡಬೇಕು ಅಷ್ಟೇ. ಡಿಲಿಮಿಟೇಷನ್ ಬೇರೆ, ಮಹಿಳಾ ಮೀಸಲಾತಿ ಬೇರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!