ಉದಯವಾಹಿನಿ, ನವದೆಹಲಿ: ಶೇ.33 ರಷ್ಟು ಮಹಿಳಾ ಮೀಸಲಾತಿ ಕೊಡುವ ಸಲುವಾಗಿ ಲೋಕಸಭಾ ಸೀಟುಗಳ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳವಾಗಲಿದೆ. ಲೋಕಸಭೆಯ ಸ್ಥಾನಗಳ ಸಂಖ್ಯೆ 815 ಕ್ಕೆ ಏರಿಕೆಯಾಗಲಿದ್ದು, ಇದರಿಂದ ಮಹಿಳೆಯರಿಗೆ 272 ಸೀಟುಗಳು ಮೀಸಲಾಗಲಿವೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ತಿಳಿಸಿದರು. ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಇಂದಿನಿಂದ 3 ದಿನ ಸಂಸತ್ ವಿಶೇಷ ಅಧಿವೇಶನ ನಡೆಸುತ್ತಿದೆ. `ನಾರಿಶಕ್ತಿ ವಂದನ್ ಅಧಿನಿಯಮ್’ ಹೆಸರಿನಲ್ಲಿ 3 ಮಸೂದೆಗಳ ತಿದ್ದುಪಡಿಗೆ ಮುಂದಾಗಿದೆ. ಲೋಕಸಭೆಯಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಹಾಗೂ ಮಹಿಳಾ ಮೀಸಲಾತಿಗೆ ಅವಕಾಶ ಕಲ್ಪಿಸುವ ಕ್ಷೇತ್ರ ಮರುವಿಂಗಡಣೆ ಮಸೂದೆ 2026 ಮಂಡಿಸಿದರು.

ಕೇಂದ್ರದ ಈ ಮಸೂದೆಗಳು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನ 543 ರಿಂದ 850 ಕ್ಕೆ ಹೆಚ್ಚಿಸುವ ಗುರಿ ಹೊಂದಿವೆ. ಇದರಲ್ಲಿ ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಇರುತ್ತಾರೆ. ಮಸೂದೆ ಮಂಡಿಸಿದ ಬಳಿಕ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಅರ್ಜುನ್ ರಾಮ್ ಮೇಘವಾಲ್, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನ ಶೇ.50 ರಷ್ಟು ಹೆಚ್ಚಿಸಲಾಗುವುದು. ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 815ಕ್ಕೆ ಹೆಚ್ಚಿಸಲಾಗುವುದು ಇದರಲ್ಲಿ 272 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಇದು ಸದನದ ಬಲದ 3ನೇ ಒಂದು ಭಾಗವಾಗಿದೆ. ಇದರಿಂದ ಯಾವುದೇ ರಾಜ್ಯಗಳಿಗೂ ನಷ್ಟವಾಗುವುದಿಲ್ಲ. ಅವರು ತಮ್ಮ ತಮ್ಮ ಬಲ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.ಈ ಮಸೂದೆಯು ಮಹಿಳೆಯರಿಗೆ ರಾಜಕೀಯ ನ್ಯಾಯವನ್ನ ಖಚಿತಪಡಿಸುತ್ತದೆ. 2023 ರಲ್ಲೇ ಮಸೂದೆಯನ್ನ ಅಂಗೀಕರಿಸಲಾಗಿತ್ತು. ಆದ್ರೆ, 2026 ರ ಜನಗಣತಿ ಮತ್ತು ಗಡಿ ನಿರ್ಣಯ ಆಧಾರದ ಮೇಲೆ ಅದರ ನಿಬಂಧನೆಗಳನ್ನು ಜಾರಿಗೆ ತರಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಇಂದು ಮಸೂದೆಯನ್ನ ಮಡಿಸಲಾಗಿದೆ ಎಂದು ವಿವರಿಸಿದರು.

 

Leave a Reply

Your email address will not be published. Required fields are marked *

error: Content is protected !!