ಉದಯವಾಹಿನಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ ಹಾಗೂ ಯಕ್ಷಗಾನ ಹರಕೆ ಪ್ರದರ್ಶನ ನಡೆದಿದೆ. ಮನೆಯ ಹಿರಿಯರು ಹೇಳಿಕೊಂಡ ಹರಕೆಯಂತೆ ಈ ಸಾಂಪ್ರದಾಯಿಕ ಆಚರಣೆ ನಡೆದಿದೆ.ಬೈಂದೂರಿನ ಕೆರಾಡಿಯಲ್ಲಿರುವ ರಿಷಬ್ ಶೆಟ್ಟಿ ಹಿರಿಯರ ಮನೆಯಲ್ಲಿ ತಂಡಗಳನ್ನು ಕರೆಸಿಕೊಂಡು ಕುಣಿತ ಭಜನೆ ನಡೆಸಲಾಯಿತು. ನಟ ರಿಷಬ್ ಶೆಟ್ಟಿ ಸ್ವತಃ ಭಜನಾ ತಂಡಗಳ ಜೊತೆ ಭಾಗವಹಿಸಿದರು. ಈ ಹಿಂದೆಯೇ ಹರಕೆ ಹೇಳಿಕೊಂಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಈ ಆಚರಣೆ ನಡೆಸಬೇಕಾಗಿತ್ತು. ಆದರೆ ಕಾಂತಾರ ಸಿನಿಮಾ ಶೂಟಿಂಗ್ ಕಾರಣಕ್ಕೆ ಇತ್ತೀಚೆಗೆ ಹರಕೆ ತೀರಿಸಲಾಗಿದೆ. ಇದೆ ವೇಳೆ ಮಾರಣಕಟ್ಟೆ ಮೇಳದ ಹರಕೆಯ ಯಕ್ಷಗಾನ ಪ್ರದರ್ಶನ ಕೂಡ ನಡೆದಿದೆ.

ಒಂದೆರಡು ದಿನದಲ್ಲಿ ‘ಜೈ ಹನುಮಾನ್’ ಬಹು ನಿರೀಕ್ಷಿತ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಕುಣಿತ ಭಜನೆಯಲ್ಲಿ ಭಾಗವಹಿಸಿದ ತಂಡಗಳಿಗೆ ಚಲನಚಿತ್ರದ ಲೋಗೋ ಹೊಂದಿದ ಟೀ ಶರ್ಟ್ ನೀಡಿ ಚಿತ್ರದ ಪ್ರಮೋಷನ್ ಕೂಡಾ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!