ಉದಯವಾಹಿನಿ, ಬೆಂಗಳೂರು: ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಕಿರಿಕ್ ಉಂಟಾಗಿ ಗೆಳೆಯನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯ ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆ ಬಳಿ ನಡೆದಿದೆ.ಮೋಹನ್(25) ಕೊಲೆಯಾದ ಯುವಕ. ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದವನಾದ ಮೋಹನ್ ಗುರುವಾರ ಸಂಜೆ ಸ್ನೇಹಿತನ ಜೊತೆ ಎಣ್ಣೆ ಪಾರ್ಟಿ ಮಾಡಲು ಬಂದಿದ್ದ. ಸ್ನೇಹಿತ ಮನೋಜ್ ಮತ್ತು ಮೋಹನ್ ಕಂಠಪೂರ್ತಿ ಕುಡಿದಿದ್ದರು. ಕುಡಿದ ನಶೆಯಲ್ಲಿ ಮೋಹನ್ ಮತ್ತು ಮನೋಜ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮನೋಜ್ ಅಲ್ಲೇ ಇದ್ದ ಕಲ್ಲನ್ನ ಮೋಹನ್ ತಲೆ ಮೇಲೆ ಎತ್ತಿಹಾಕಿದ್ದಾನೆ. ಘಟನೆ ಪರಿಣಾಮ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!