ಉದಯವಾಹಿನಿ, ಬಳ್ಳಾರಿ: ‘ಬಳ್ಳಾರಿ ಬಿಸಿಲು’ ಅಂದ್ರೆ ಸುಮ್ನೆ ಅಲ್ಲ. ಅದು ಮೈ ಸುಡುವ ಕೆಂಡದಂತಹ ತಾಪಮಾನಕ್ಕೆ ಹೆಸರುವಾಸಿ. ಈ ಬಾರಿ ಏಪ್ರಿಲ್ ತಿಂಗಳಲ್ಲೇ ನವದೆಹಲಿ: “ಸಂವಿಧಾನ ತಿದ್ದುಪಡಿ ಮಸೂದೆಗೂ ಮಹಿಳಾ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಆದರೆ ದಕ್ಷಿಣ, ಈಶಾನ್ಯ ಮತ್ತು ಸಣ್ಣ ಸಣ್ಣ ರಾಜ್ಯಗಳಿಂದ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಮೂಲಕ ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದು ರಾಷ್ಟ್ರ ವಿರೋಧಿ ಕೃತ್ಯಕ್ಕಿಂತ ಕಡಿಮೆಯಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿಂದು ಲೋಕಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಮಸೂದೆ ಜಾರಿಗೆ ತರುತ್ತಿಲ್ಲ. ಇದು ಮಹಿಳಾ ಮೀಸಲಾತಿ ಮಸೂದೆಯಲ್ಲ. ಇದಕ್ಕೂ ಮಹಿಳಾ ಸಬಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಮಸೂದೆ ಮೂಲಕ ಭಾರತದ ಮಹಿಳೆಯರನ್ನು ಬಳಸಿಕೊಂಡು ಅವರ ಹಿಂದೆ ಅಡಗಿಕೊಂಡು ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನದ ಭಾಗವಾಗಿದೆ ಎಂದು ಅವರು ಆರೋಪಿಸಿದರು. ರಾಹುಲ್ ಗಾಂಧಿ ಅವರ ಹೇಳಿಕೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಗದ್ದಲದ ನಡುವೆ ತಮ್ಮ ಮಾತು ಮುಂದಿವರಿಸಿದ ಅವರು, 2023ರಲ್ಲಿ ಇದೇ ಸದನದಲ್ಲಿ ಮಸೂದೆ ಅಂಗೀಕರಿಸಲ್ಪಟ್ಟಿದ್ದರೂ ಇನ್ನೂ ಏಕೆ ಬಾಕಿ ಉಳಿದಿದೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಸರ್ಕಾರ 23ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಬೇಕು. ತಂದಿದ್ದೇಯಾದಲ್ಲಿ ಪ್ರತಿಪಕ್ಷಗಳು ಕ್ಷಣವೂ ಯೋಚಿಸುವುದಿಲ್ಲ ಎಂದು ಹೇಳಿದರು.
ಈಗ ಮಂಡಿಸಿರುವ ಮಹಿಳಾ ಮೀಸಲಾತಿ ಬಿಲ್, ಓಬಿಸಿ, ದಲಿತ, ಅಲ್ಪ ಸಂಖ್ಯಾತರು ಹಾಗೂ ಮಹಿಳೆಯರನ್ನು ಮಗಿಸುವ ಪ್ರಯತ್ನವಾಗಿದೆ. ದಲಿತರು ಓಬಿಸಿಯಿಂದ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನವಾಗಿದೆ. ಜಾತಿ ಜನಗಣತಿಯಿಂದ ಮುಂದಿನ 10-15 ವರ್ಷ ಏನು ಮಾಡಲು ಸಾಧ್ಯವಾಗದಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
