ಉದಯವಾಹಿನಿ, ಡಾರ್ಜಿಲಿಂಗ್ ಜಿಲ್ಲೆ (ಬಂಗಾಳ): 1840ರ ಸಂದರ್ಭದಲ್ಲಿ ಭಾರತದಲ್ಲಿದ್ದ ಬ್ರಿಟಿಷರು ಉತ್ತರ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಟೀ ಗಿಡಗಳನ್ನು ನೆಟ್ಟು, ಚಹಾ ಉದ್ಯಮ ಆರಂಭಿಸಿದರು. ಅದು ಬೃಹತ್ ಉದ್ಯಮವಾಗಿ ಬೆಳೆದು ಲಕ್ಷಾಂತರ ಮಂದಿಗೆ ಜೀವನೋಪಾಯದ ಹಾದಿಯಾಗಿದೆ. ಉ. ಬಂಗಾಳದ ಹಲವು ಜಿಗಳಲ್ಲಿ ಟೀ ಎಸ್ಟೇಟ್‌ಗಳು ವಿಸ್ತಾರವಾಗಿ ಹಬ್ಬಿದ್ದು, ಇಲ್ಲಿ ಉತ್ಪಾದನೆ ಯಾಗುವ ಟೀ ಪೌಡರ್‌ಗಳು ವಿಶ್ವದೆಡೆ ಪೂರೈಕೆಯಾಗುತ್ತಿವೆ.
ಬಂಗಾಳದಲ್ಲಿ ಕಾರ್ಮಿಕರ ಕೊರತೆ ಹಾಗೂ ಹವಾಮಾನ ಬದಲಾವಣೆಗಳಿಂದಾಗಿ ಈಚಿನ ವರ್ಷ ಗಳಲ್ಲಿ ಚಹಾ ಉತ್ಪಾದನೆ ಸಣ್ಣ ಮಟ್ಟಿಗೆ ತಗ್ಗಿದೆ. ಇಲ್ಲಿನ ಪಟ್ಟಣ-ಗ್ರಾಮೀಣ ಭಾಗಗಳ ವಿಶಾಲ ಜಮೀನುಗಳಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಟೀ ಗಾರ್ಡನ್‌ಗಳಲ್ಲಿ ಆದಿವಾಸಿ ಸಮುದಾಯದ ಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಎಲೆಗಳನ್ನು ಕೀಳುತ್ತಿರುವ ದೃಶ್ಯ ಕಾಣಸಿಗುತ್ತದೆ. ಈ ಆದಿವಾಸಿ ಕಾರ್ಮಿಕ ವರ್ಗದವರು ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆರಂಭ ದಲ್ಲಿ ಎಡಪಕ್ಷಗಳು, ಕಾಂಗ್ರೆಸ್, ನಂತರ ಟಿಎಂಸಿ, ಬಿಜೆಪಿ ಆದಿವಾಸಿ ಮತಬ್ಯಾಂಕ್ ಅನ್ನು ಸೆಳೆಯು ತ್ತಲೇ ಬಂದಿವೆ. ಸಿಲಿಗುರಿಯಿಂದ ಡಾರ್ಜಿಲಿಂಗ್‌ಗೆ ತೆರಳುತ್ತಿದ್ದಾಗ ಸುಕ್ನಾ ಎಂಬ ಪ್ರದೇಶದಲ್ಲಿ ಆದಿವಾಸಿ ಮಹಿಳೆಯರು ಟೀ ಗಾರ್ಡನ್‌ನಲ್ಲಿ ಎಲೆಗಳನ್ನು ಕೀಳುತ್ತಿದ್ದರು.

ಬೆಳಗ್ಗೆ 8 ರಿಂದಲೇ ಕೆಲಸ ಆರಂಭಿಸಿದ್ದ ತಾರಾ ನಗಾಸಿಯಾ ಎಂಬ 30ರ ಆಸುಪಾಸಿನ ಮಹಿಳೆ ಯನ್ನು ಚುನಾವಣೆ ಕುರಿತ ಮಾತಿಗೆಳೆದೆ. ಆರಂಭದಲ್ಲಿ ಆಕೆ ಹೆಚ್ಚು ಆಸಕ್ತಿ ತೋರಿಸದಿದ್ದರೂ, “ನಮ್ಮ ಜೀವನ ಸುಧಾರಿಸುವ ಮಂದಿ ಅಧಿಕಾರಕ್ಕೆ ಬರಬೇಕು” ಎನ್ನುತ್ತಾ, ತನ್ನ ಜೀವನದ ಬವಣೆ‌ ಗಳನ್ನು ಬಿಚ್ಚಿಟ್ಟಳು. “ಬೆಳಗ್ಗೆ 8.30ರ ಆಸುಪಾಸಿಗೆ ಕೆಲಸ ಆರಂಭ. 11.30ರಿಂದ 1 ಗಂಟೆ ತನಕ ಮಧ್ಯಾಹ್ನ ಭೋಜನ ವಿರಾಮ. 1 ಗಂಟೆಯಿಂದ ಸಂಜೆ 4.30 ಅಥವಾ 5 ಗಂಟೆ ತನಕ ಗಾರ್ಡನ್‌ನಲ್ಲಿ ಕೆಲಸ. ಆದರೆ ಸಂಬಳ ದಿನಕ್ಕೆ 250 ರು. ಮಾತ್ರ” ಎಂದಳು ತಾರಾ. “ಎಸ್ಟೇಟ್ ಮಾಲೀಕರು ಕಾರ್ಮಿಕರಿಗೆ 15 ದಿನಕ್ಕೊಮ್ಮೆ ವೇತನ ನೀಡುತ್ತಾರೆ. ಅಂದರೆ, ತಿಂಗಳಿಗೆ 7500 ರುಪಾಯಿ.

 

 

Leave a Reply

Your email address will not be published. Required fields are marked *

error: Content is protected !!