ಉದಯವಾಹಿನಿ, ಚಿಕ್ಕಮಗಳೂರು: ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಹುಚ್ಚಂಬಟ್ಟೆ ಏರಿಕೆ ಮಾಡಿದೆ. ಇದು ಸರಿಯಾದ ನಿರ್ಧಾರ ಅಲ್ಲ. ದರ ಹೀಗೆ ಏರಿಕೆಯಾದ್ರೆ ಸಾಮಾನ್ಯ ಜನ ಬದುಕೋದು ಹೇಗೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯ ಭವನ ಉದ್ಘಾಟನೆಗೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿ, ವಿದ್ಯುತ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸರ್ಕಾರ ವಿದ್ಯುತ್‌ ದರ ಏರಿಸಿರುವ ನಿರ್ಧಾರ ಖಂಡಿತಾ ಸರಿ ಇಲ್ಲ. ಸರಿಯಾಗಿ ಆಡಳಿತ ಮಾಡಲು ಬಾರದೆ ಬೇಕಾಬಿಟ್ಟಿ ಜಾಸ್ತಿ ಮಾಡಿದ್ದಾರೆ. ಸರ್ಕಾರ ಕೂಡಲೇ ವಿದ್ಯುತ್ ದರ ಏರಿಕೆ ನಿರ್ಧಾರ ವಾಪಸ್ ಪಡೆದು ಜನ ನೆಮ್ಮದಿಯಿಂದ ಬದುಕೋಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮಕ್ಕೆ ತೆರಳೋ ಮುನ್ನ ಎಂಎಲ್‌ಸಿ ಸಿ.ಟಿ.ರವಿಯವರ ಮನೆಗೆ ಅವರು ಭೇಟಿ ನೀಡಿದ್ದರು. ಈ ವೇಳೆ ಸಿ.ಟಿ.ರವಿ ದಂಪತಿ ಆರತಿ ಮಾಡಿ ಮನೆಯೊಳಗೆ ಕರೆದೊಯ್ದರು. ಬಳಿಕ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲಿಂದ ಕಾರ್ಯಕ್ರಮಕ್ಕೆ ತೆರಳಿ, ಸಮುದಾಯ ಭವನ ಉದ್ಘಾಟಿದರು. ನಂತರ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Leave a Reply

Your email address will not be published. Required fields are marked *

error: Content is protected !!