ಉದಯವಾಹಿನಿ, ಬೇಸಿಗೆಯ ತಿಂಗಳುಗಳಲ್ಲಿ ಕಲ್ಲಂಗಡಿ ಹಣ್ಣು ಸುಲಭವಾಗಿ ಲಭ್ಯವಿದೆ. ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲರೂ ಈ ಸಿಹಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ಅಧಿಕ ನೀರಿನ ಅಂಶವಿದೆ. ಇದು ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ತಡೆಯಲು ತುಂಬಾ ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸುವುದರೊಂದಿಗೆ ಇದರಲ್ಲಿ ಹಲವಾರು ಪೋಷಕಾಂಶಗಳನ್ನು ಅಡಕವಾಗಿವೆ. ಇದು ವಿಟಮಿನ್ ಸಿ ಹೊಂದಿರುವ ಜೊತೆಗೆ ದೇಹಕ್ಕೆ ಅಗತ್ಯ ಇರುವ ರೋಗನಿರೋಧಕ ಶಕ್ತಿ ಒದಗಿಸುತ್ತದೆ.
ಕಲ್ಲಂಗಡಿ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಹೊಂದಿದೆ. ಕಲ್ಲಂಗಡಿ ಹಣ್ಣು ಸೇವನೆ ಮಾಡುವುದರಿಂದ ಹೃದಯವು ಆರೋಗ್ಯಕರವಾಗಿರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಸಹಾಯ ಮಾಡುತ್ತದೆ. ಇದು ಪೊಟ್ಯಾಸಿಯಮ್, ರೈಬೋಫ್ಲಾವಿನ್, ಕಬ್ಬಿಣ, ಕ್ಯಾಲ್ಸಿಯಂ, ಸತು, ಫೈಬರ್, ನಿಯಾಸಿನ್, ವಿಟಮಿನ್ ಎ, ಬಿ ಹಾಗೂ ಸಿ, ಹಾಗೆಯೇ ಲೈಕೋಪೀನ್ ರೀತಿಯ ಪೋಷಕಾಂಶಗಳಿ ಇದರಲ್ಲಿವೆ. ಕಲ್ಲಂಗಡಿ ಸೇವಿಸುವುದು ಚರ್ಮಕ್ಕೂ ಪ್ರಯೋಜನಕಾರಿ. ಕಲ್ಲಂಗಡಿ ತಿನ್ನುವುದರಿಂದಾಗುವ ಲಭಿಸುವ ಪ್ರಯೋಜನಗಳೇನು? ಕಲ್ಲಂಗಡಿ ಹಣ್ಣನ್ನು ಹೇಗೆ ಸೇವಿಸಬೇಕು ಹಾಗೂ ಮಧುಮೇಹಿಗಳು ಈ ಹಣ್ಣನ್ನು ಸೇವನೆ ಮಾಡುವುದು ತಮ್ಮ ಆಹಾರದಲ್ಲಿ ಸುರಕ್ಷಿತವಾಗಿದೆಯೇ ಎಂಬುದನ್ನು ಅರಿತುಕೊಳ್ಳೋಣ.
ಪೌಷ್ಟಿಕತಜ್ಞರು ತಿಳಿಸುವ ಪ್ರಕಾರ, ಕಲ್ಲಂಗಡಿ ದೇಹಕ್ಕೆ ಅತ್ಯುತ್ತಮವಾದ ಜಲಸಂಚಯನ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಅತ್ಯುತ್ತಮ ಆಯ್ಕೆಯಾಗಿದೆ. ಇದು ಶೇಕಡಾ 90ಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಕಲ್ಲಂಗಡಿ ಹಣ್ಣು ದೇಹಕ್ಕೆ ನೈಸರ್ಗಿಕ ಹೈಡ್ರೇಟ್ ಆಗಿರುವಂತೆ ಮಾಡುತ್ತದೆ. ಎರಡು ಕಪ್ ಕಲ್ಲಂಗಡಿ ಸೇವಿಸುವುದರಿಂದ ಕೇವಲ 80 ಕ್ಯಾಲೊರಿಗಳು ದೊರೆಯುತ್ತವೆ. ಇತರ ಮೂಲಗಳಿಗಿಂತ ಇದು ಗಮನಾರ್ಹವಾಗಿ ಹೆಚ್ಚಿನ ಪ್ರಮಾಣದ ಲೈಕೋಪೀನ್ ಅನ್ನು ಸಹ ಹೊಂದಿರುತ್ತದೆ. ಇದು ಹೃದಯದ ಆರೋಗ್ಯ ಹಾಗೂ ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇದು ನಿಜವಾಗಿಯೂ ವಿವಿಧ ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ.
ಕಲ್ಲಂಗಡಿಯ ಪ್ರಯೋಜನಗಳೇನು & ದೊರೆಯುವ ಪೋಷಕಾಂಶಗಳೇನು?: ಪೌಷ್ಟಿಕ ತಜ್ಞರು ಮಾಹಿತಿ ನೀಡುವ ಪ್ರಕಾರ, ಕಲ್ಲಂಗಡಿ ಶೇ.91.5ರಷ್ಟು ನೀರನ್ನು ಹೊಂದಿದೆ. ಇದು ಕೇವಲ ಹಣ್ಣಲ್ಲ, ದೇಹಕ್ಕೆ ಹೈಡ್ರೇಟ್ ಆಗಿರಿಸಲು ನೈಸರ್ಗಿಕ ಮೂಲವಾಗಿದೆ. ಎರಡು ಕಪ್ ಕಲ್ಲಂಗಡಿ ಸೇವಿಸುವುದರಿಂದ ಕೇವಲ 80 ಕ್ಯಾಲೊರಿಗಳು ದೊರೆಯುತ್ತವೆ. ಕಲ್ಲಂಗಡಿ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನಂತಹ ಅಗತ್ಯ ಪೋಷಕಾಂಶಗಳು ಹೇರಳಬವಾಗಿವೆ. ಕಲ್ಲಂಗಡಿ ನಿರ್ಜಲೀಕರಣ ತಡೆಯಲು ಹೆಚ್ಚು ಸಹಾಯ ಮಾಡುತ್ತದೆ.
ಹೃದಯ ಆರೋಗ್ಯಕ್ಕೆ ಬೆಸ್ಟ್: ಕಲ್ಲಂಗಡಿಯಲ್ಲಿ ಎಲ್-ಸಿಟ್ರುಲಿನ್ ಎಂಬ ಅಮೈನೋ ಆಮ್ಲದ ಹೆಚ್ಚಿನ ಸಾಂದ್ರತೆಯಿದೆ. ದೇಹವು ಒಮ್ಮೆ ಹೀರಿಕೊಂಡ ಬಳಿಕ, ಅದು ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. 2025ರ ಅಧ್ಯಯನವು ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಬಹಿರಂಗಪಡಿಸಿದೆ.
