ಉದಯವಾಹಿನಿ, ವಾಷಿಂಗ್ಟನ್‌: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕದ ಗುಪ್ತಚರ ಸಂಸ್ಥೆ ಮತ್ತು ಮಾಧ್ಯಮಗಳು ಅಮೆರಿಕ ಆಡಳಿತಕ್ಕೆ ಒಂದು ‘ರೆಡ್ ಫ್ಲಾಗ್’ (ಎಚ್ಚರಿಕೆಯ ಸಂಕೇತ) ಎಂದು ಬಣ್ಣಿಸಿವೆ.
ಮುನೀರ್ ಅವರು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಾಯಕತ್ವದೊಂದಿಗೆ ವೈಯಕ್ತಿಕ ಮತ್ತು ಹಳೆಯ ಸ್ನೇಹ ಹೊಂದಿದ್ದಾರೆ ಎನ್ನುವುದು ಅಮೆರಿಕದ ಆತಂಕಕ್ಕೆ ಮುಖ್ಯ ಕಾರಣ. ಬಹಳ ಮುಖ್ಯವಾಗಿ ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಂ ಸುಲೈಮಾನಿ ಮತ್ತು ಪ್ರಸ್ತುತ ಕಮಾಂಡರ್ ಹೊಸೈನ್ ಸಲಾಮಿ ಅವರೊಂದಿಗೆ ಮುನೀರ್‌ಗೆ ನಿಕಟ ಸಂಬಂಧವಿದೆ ಎಂದು ವರದಿಯಾಗಿದೆ.
ಮುನೀರ್ ಅವರು ಇರಾನ್(Iran) ನಾಯಕರ ಭೇಟಿಯ ಸಮಯದಲ್ಲಿ ಸೇನಾ ಸಮವಸ್ತ್ರ ಧರಿಸುವುದು ಮತ್ತು ಅಮೆರಿಕದ ಜೊತೆಗಿನ ಮಾತುಕತೆಗಳಲ್ಲಿ ಸೂಟ್‌ ಧರಿಸುವುದು ಅವರ “ದ್ವಂದ್ವ ಮುಖ”ವನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಅಫ್ಘಾನಿಸ್ತಾನ ವಿರುದ್ಧ ಯುದ್ಧದ ಸಂದದರ್ಭದಲ್ಲಿ ಅಮೆರಿಕದ ಮಿತ್ರನಂತೆ ನಟಿಸಿದರೂ ಪಾಕಿಸ್ತಾನ ತಾಲಿಬಾನ್‌ಗೆ ಬೆಂಬಲ ನೀಡಿತ್ತು. ಬಹಳ ಮುಖ್ಯವಾಗಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನೆಲೆಸಿದ್ದ. ಇದೇ ರೀತಿ ಮುನೀರ್ ಅವರೂ ಕೂಡ ಅಮೆರಿಕಕ್ಕೆ ದ್ರೋಹ ಎಸಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!