![]()
ಉದಯವಾಹಿನಿ,
ಗೋಪೇಶ್ವರ್(ಉತ್ತರಾಖಂಡ) : ಅಲಕಾನಂದ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿದ ಪರಿಣಾಮ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ನದಿಗೆ ಬಿದ್ದಿದ್ದರು. ಆದರೆ ಒಬ್ಬರು ಈಜಿ ದಡ ಸೇರಿದರೆ, ಮತ್ತೊಬ್ಬರು ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.ನಾಪತ್ತೆಯಾಗಿರುವ ಕಾರ್ಮಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಚಮೋಲಿಯ ಪೊಲೀಸ್ ಅಧಿಕಾರಿ ಪ್ರಮೇಂದ್ರ ದೋಹಲ್ ಹೇಳಿದ್ದಾರೆ. ಬ್ರಹ್ಮಕಪಲ್ ಬಳಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದು ಬದ್ರಿನಾಥ್ ಮಾಸ್ಟರ್ ಪ್ಲಾನ್ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೋಹಲ್ ಹೇಳಿದ್ದಾರೆ.
