ಉದಯವಾಹಿನಿ, ಸಿಯೋಲ್ : ಇಪ್ಪತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 20ನೇ ಮಹಡಿಯ ಅತ್ಯಂತ ಕಿರಿದಾದ ಅಂಚಿನಲ್ಲಿ ನೇತಾಡುತ್ತಿದ್ದಳು. ಆಕೆ ಜಿಗಿಯಲು ಸಿದ್ಧವಾದ ಕ್ಷಣದಲ್ಲೇ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಆಕೆಯ ಕೂದಲು ಹಿಡಿದಿದ್ದಾರೆ. ಆಕೆ ಜಾರಿ ಕೆಳಕ್ಕೆ ಬೀಳುತ್ತಿದ್ದಂತೆ ಆ ವ್ಯಕ್ತಿ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಳಿಕ ಮತ್ತೋರ್ವ ವ್ಯಕ್ತಿ ಬಂದು ಆಕೆಯನ್ನು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಬರೋಬ್ಬರಿ 71 ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು 19 ತುರ್ತು ವಾಹನಗಳು ಧಾವಿಸಿದವು. ಅಕಸ್ಮಾತ್ ಆಕೆ ಮೇಲಿಂದ ಬಿದ್ದರೆ ಪ್ರಾಣ ಉಳಿಸಲು ಕಟ್ಟಡದ ಕೆಳಗೆ ಬೃಹತ್ ‘ಗಾಳಿ ಹಾಸಿಗೆಯನ್ನು ಅಳವಡಿಸಲಾಗಿತ್ತು. ಇಡೀ ಪ್ರದೇಶವು ಒಂದು ರೀತಿಯ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.

 

Leave a Reply

Your email address will not be published. Required fields are marked *

error: Content is protected !!