ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಸಾವಿರಾರು ಆಮದುದಾರರಿಗೆ ‘ಬಿಗ್ ಮಂಡೇ’. ಟ್ರಂಪ್ ಸರ್ಕಾರವು ವಿದೇಶಿ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಪ್ರಮಾಣದ ಸುಂಕವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ, ಇಂದಿನಿಂದ ಆ ಹಣವನ್ನು ಮರಳಿ ಪಡೆಯಲು ಆನ್‌ಲೈನ್ ಪೋರ್ಟಲ್ ಕಾರ್ಯಾರಂಭ ಮಾಡಿದೆ.

ಕಳೆದ ವರ್ಷ ಅಧ್ಯಕ್ಷ ಟ್ರಂಪ್ ಅವರು ಅಮೆರಿಕದ ವ್ಯಾಪಾರ ಕೊರತೆಯನ್ನು (ಟ್ರೇಡ್ ಡೆಫಿಸಿಟ್) ಕಡಿಮೆ ಮಾಡಲು ತುರ್ತು ಪರಿಸ್ಥಿತಿ ಅಧಿಕಾರವನ್ನು ಬಳಸಿ ಚೀನಾ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳ ಮೇಲೆ ಭಾರಿ ಆಮದು ಸುಂಕ ವಿಧಿಸಿದ್ದರು. ಆದರೆ, ಫೆಬ್ರವರಿ 2026 ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, “ತೆರಿಗೆ ವಿಧಿಸುವ ಅಧಿಕಾರ ಸಂಸತ್ತಿಗೆ (Congress) ಇದೆಯೇ ಹೊರತು ಅಧ್ಯಕ್ಷರಿಗಲ್ಲ” ಎಂದು ಹೇಳಿ ಈ ಸುಂಕವನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಗ ವಸೂಲಿ ಮಾಡಲಾಗಿದ್ದ ಸುಂಕವನ್ನು ಸರ್ಕಾರ ಈಗ ವಾಪಸ್ ಮಾಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!