ಉದಯವಾಹಿನಿ, ಮೆಲ್ಬರ್ನ್: ಆಸ್ಟ್ರೇಲಿಯಾದ ಕಡಲತೀರದಲ್ಲಿ ಕಳೆದ ತಿಂಗಳು ಪತ್ತೆಯಾಗಿದ್ದ ಗುಮ್ಮಟ ಆಕಾರದ ನಿಗೂಢ ವಸ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್‌ನ ಭಾಗ ಎಂದು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಅಂತಿಮ ನಿರ್ಣಯಕ್ಕೆ ಬಂದಿದೆ.ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಬೀಚ್ ಬಳಿ ಜುಲೈ 15ರಂದು ವಸ್ತು ಪತ್ತೆಯಾಗಿತ್ತು.
‘ನಿಗೂಢ ವಸ್ತುವಿನ ವಿಚಾರವಾಗಿ ನಾವು ಅಂತಿಮ ನಿರ್ಣಯಕ್ಕೆ ಬಂದಿದ್ದೇವೆ. ಅದು ಇಸ್ರೊ ಹಾರಿಸಿದ್ದ ‘ಪೋಲಾರ್ ಉಪಗ್ರಹ ಉಡಾವಣಾ ವಾಹನ
(ಪಿಎಸ್‌ಎಲ್‌ವಿ)’ದ ಮೂರನೇ ಹಂತದ ಬಿಡಿ ಭಾಗ ಎಂದು ತೀರ್ಮಾನಿಸಿದ್ದೇವೆ’ ಎಂದು ಎಎಎಸ್‌ಎ ತಿಳಿಸಿದೆ.
