ಉದಯವಾಹಿನಿ,
ಇಸ್ಲಾಮಾಬಾದ್ : ದೇಶ ಮತ್ತು ಸೇನೆ ಕುರಿತ ಗೋಪ್ಯ ಮಾಹಿತಿ ಬಹಿರಂಗಪಡಿಸುವವರಿಗೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ಪಾಕಿಸ್ತಾನ ಸೇನಾ ಕಾಯ್ದೆ-1952ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಪಾಕಿಸ್ತಾನ ಸಂಸತ್ತು ಅಂಗೀಕರಿಸಿದೆ.
ಕಳೆದ ವಾರ ಮೇಲ್ಮನೆಯಲ್ಲಿ ಮಸೂದೆಯನ್ನು ಅನುಮೋದಿಸಲಾಗಿತ್ತು. ಸೋಮವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇದಕ್ಕೆ ಒಪ್ಪಿಗೆ ನೀಡಿದ್ದು ಅಧ್ಯಕ್ಷ ಆರಿಫ್ ಅಲ್ವಿ ಅವರ ಸಹಿ ನಂತರ ಇದು ಕಾಯ್ದೆಯಾಗಲಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಮುಖ ಸೇನಾ ಸಂಸ್ಥೆಗಳ ಮೇಲೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸರ್ಕಾರ ಕಾಯ್ದೆಯ ತಿದ್ದುಪಡಿಗೆ ಮುಂದಾಗಿದೆ.
