ಉದಯವಾಹಿನಿ,ಹಲಸಿನಕಾಯಿ ಉಪ್ಪಿನಕಾಯಿ ಹೆಸರು ಕೇಳಿದ್ರೆ ಸಾಕು, ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತವೆ. ಅಜ್ಜಿ-ಅಮ್ಮ ಬೇಸಿಗೆಯಲ್ಲಿ ಮಸಾಲೆಭರಿತ ಉಪ್ಪಿನಕಾಯಿ ಮಾಡಿ, ದೊಡ್ಡ ಜಾಡಿಯಲ್ಲಿ ತುಂಬಿಡುತ್ತಿದ್ದ ಕಾಲ ನೆನಪಾಗುತ್ತೆ ಅಲ್ವಾ? ಅದರ ಪರಿಮಳ, ರುಚಿಯೇ ಬೇರೆ. ಅದೇ ಹಳೇ ದೇಸಿ ರುಚಿಯನ್ನು ನೀವು ಮತ್ತೆ ಸವಿಯಬೇಕು ಅನ್ಕೊಂಡಿದ್ರೆ, ಮನೆಯಲ್ಲೇ ಸುಲಭವಾಗಿ ಹಲಸಿನಕಾಯಿ ಉಪ್ಪಿನಕಾಯಿ ಮಾಡಬಹುದು. ಸರಿಯಾದ ಮಸಾಲೆ ಮತ್ತು ಬಿಸಿಲಿನಲ್ಲಿ ಒಣಗಿಸಿದರೆ ಈ ಉಪ್ಪಿನಕಾಯಿ ಹೆಚ್ಚು ದಿನಗಳ ಕಾಲ ರುಚಿಯಾಗಿರುತ್ತದೆ.
ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು
* 500 ಗ್ರಾಂ ಎಳೆ ಹಲಸಿನಕಾಯಿ
* 3 ದೊಡ್ಡ ಚಮಚ ಸಾಸಿವೆ ಎಣ್ಣೆ
* 2 ದೊಡ್ಡ ಚಮಚ ಹಳದಿ ಸಾಸಿವೆ ಪುಡಿ
* 1 ದೊಡ್ಡ ಚಮಚ ಸೋಂಪು (ಬಡೇಸೊಪ್ಪು)
* 1 ಚಿಕ್ಕ ಚಮಚ ಮೆಂತ್ಯ
* 1 ಚಿಕ್ಕ ಚಮಚ ಕಲೋಂಜಿ (ಕಪ್ಪು ಜೀರಿಗೆ)
* 1 ಚಿಕ್ಕ ಚಮಚ ಅರಿಶಿನ ಪುಡಿ
* 1 ದೊಡ್ಡ ಚಮಚ ಖಾರದ ಪುಡಿ
* 1 ಚಿಕ್ಕ ಚಮಚ ಇಂಗು
* 2 ದೊಡ್ಡ ಚಮಚ ಉಪ್ಪು
* 2 ದೊಡ್ಡ ಚಮಚ ನಿಂಬೆರಸ
* 1/2 ಚಿಕ್ಕ ಚಮಚ ಅಜ್ವೈನ್ (ಓಂಕಾಳು)
ಮೊದಲು, ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಹಲಸಿನಕಾಯಿ ಸಿಪ್ಪೆ ತೆಗೆಯಿರಿ. ಇದರಿಂದ ಅದರ ಅಂಟು ಕೈಗೆ ತಗಲುವುದಿಲ್ಲ. ನಂತರ, ಹಲಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಬೀಜಗಳನ್ನು ತೆಗೆಯಿರಿ. ಆಮೇಲೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಈ ತುಂಡುಗಳನ್ನು 5 ರಿಂದ 7 ನಿಮಿಷಗಳ ಕಾಲ ಸ್ವಲ್ಪ ಬೇಯಿಸಿಕೊಳ್ಳಿ. ಇದರಿಂದ ಅವು ಮೆತ್ತಗಾಗುತ್ತವೆ. ಬಳಿಕ, ನೀರು ಬಸಿದು ಒಣಗಲು ಬಿಡಿ. ಈಗ, ಒಂದು ಬಾಣಲೆಯಲ್ಲಿ ಮೆಂತ್ಯ ಮತ್ತು ಸೋಂಪನ್ನು ಲಘುವಾಗಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ, ಇವನ್ನು ತರಿತರಿಯಾಗಿ ಪುಡಿ ಮಾಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಸಾಸಿವೆ ಪುಡಿ, ಅರಿಶಿನ, ಖಾರದ ಪುಡಿ, ಉಪ್ಪು, ಇಂಗು, ಓಂಕಾಳು ಮತ್ತು ಕಲೋಂಜಿ ಹಾಕಿ. ಇದಕ್ಕೆ ಹುರಿದು ಪುಡಿ ಮಾಡಿದ ಮಸಾಲೆಯನ್ನೂ ಸೇರಿಸಿ. ಇದೇ ಮಸಾಲೆ ಉಪ್ಪಿನಕಾಯಿಗೆ ಆ ಸಾಂಪ್ರದಾಯಿಕ ದೇಸಿ ರುಚಿ ಕೊಡೋದು.
