ಉದಯವಾಹಿನಿ, ಬೆಂಗಳೂರು: ಕೊಡಗಿನ ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ರೇಪ್ ಆರೋಪ ಪ್ರಕರಣದಲ್ಲಿ ಇಬ್ಬರ ಬಂಧನ ಆಗಿದೆ ಅಂತ ಸ್ಥಳೀಯ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಾಹಿತಿ ನೀಡಿದ್ದಾರೆ. ಕರಣದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿದೇಶಿ‌ ಪ್ರಜೆ ಪ್ರವಾಸಕ್ಕೆ ಬಂದಿದ್ದರು. ಹೋಂ ಸ್ಟೇನಲ್ಲಿ ಕೆಲಸ ಮಾಡೋರು ಈ ಕೆಲಸ ಮಾಡಿದ್ದಾಗಿ ದೂರು ಕೊಡಲಾಗಿದೆ. ಹೋಂ ಸ್ಟೇ ಮಾಲೀಕರು ಸರಿಯಾಗಿ ಸ್ಪಂದನೆ ನೀಡಿಲ್ಲ. ಬಳಿಕ ದೂರಿನ ಆಧಾರದಲ್ಲಿ FIR ದಾಖಲೆ ಮಾಡಿ ಅವರ ಬಂಧಿಸಲಾಗಿದೆ. ಅತ್ಯಾಚಾರ, ಫೋಕ್ಸೋದಲ್ಲಿ ಸಂತ್ರಸ್ತರ ಮಾಹಿತಿ ಕೊಡಬಾರದು. ಹೀಗಾಗಿ ಪೊಲೀಸರು ಮಾಹಿತಿ ನೀಡಿರಲಿಲ್ಲ. ಎಸ್ಪಿ ತನಿಖೆ ಮಾಡ್ತಾ ಇದ್ದಾರೆ. ನಾನು ಎಸ್ಪಿ, ಐಜಿಯವರ ಬಳಿ ದೂರವಾಣಿಯಲ್ಲಿ ಮಾತಾಡಿದ್ದೇನೆ. ಕೊಡಗಿನಲ್ಲಿ ಹೀಗೆ ಆಗಿರೋದು ನೋವಾಗಿದೆ‌. ಕೊಡಗಿನಲ್ಲಿ ಹಿಂದೆ ಹೀಗೆ ಆಗಿಲ್ಲ. ಹೋಂ ಸ್ಟೇ ಬಗ್ಗೆಯೂ ತನಿಖೆ ಆಗಬೇಕು. ಪ್ರವಾಸಿಗರಿಗೆ ಮಾರ್ಗಸೂಚಿ ಕೊಡಬೇಕಾಗಿದೆ ಎಂದರು.
ತನಿಖೆಯಲ್ಲಿ ನಾವೇನು ಹಸ್ತಕ್ಷೇಪ ಮಾಡಿಲ್ಲ. ಮಹಿಳೆ ತನಿಖೆಗೆ ಸಹಕಾರ ನೀಡಿದ್ದಾರೆ. ಇವತ್ತು ಆಕೆ ವಿದೇಶಕ್ಕೆ ಹೋಗ್ತಾರೆ ಅನ್ನಿಸುತ್ತೆ. ಇಬ್ಬರು ಆರೋಪಿಗಳು ಅಲ್ಲಿ ಕೆಲಸ ‌ಮಾಡ್ತಾ ಇದ್ದರು. ತನಿಖೆ ಮತ್ತಷ್ಟು ಚುರುಕಾಗಬೇಕು. ರಾಯಭಾರಿ ಕಚೇರಿಗೆ ಅವರು ಹೋಗಿಲ್ಲ. ರಾಯಭಾರಿ ಕಚೇರಿಯಿಂದ ಪ್ರವಾಸಿಗರಿಗೆ ಕೊಡುವ ಅಧಿಕಾರಿಗಳಿಗೆ ಆಕೆ ಮಾಹಿತಿ ನೀಡಿದ್ದಾರೆ. ಅದರ ಮೇಲೆ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ ಗೊತ್ತಿಲ್ಲ. ಎಸ್ಪಿ ಮಾಹಿತಿ ಕೊಟ್ಟಿದ್ದಾರೆ. ಮುಂದೆ ತನಿಖೆ ಆಗುತ್ತದೆ ಅಂತ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!