ಉದಯವಾಹಿನಿ,ಬೆಂಗಳೂರು: ಜಿಮ್ ಟ್ರೈನರ್‌ನನ್ನು ಪ್ರೀತಿಸಿ ಮದುವೆಯಾಗಿ ಈಗ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಅಣ್ಣನ ತರ ಅಂದಿದ್ಲು, ಈಗ ಅಣ್ಣನ ಜೊತೆಯೇ ಓಡಿ ಹೋಗಿದ್ದಾಳೆಂದು ಪತಿ ಅಳಲು ತೋಡಿಕೊಂಡಿದ್ದಾರೆ.ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ನಿತೇಶ್ ಹಾಗೂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರನ್ನು ಒಪ್ಪಿಸಿ ಇಬ್ಬರು ಸಪ್ತಪದಿ ತುಳಿದಿದ್ದರು. ಇದೀಗ ಪತ್ನಿ ಪತಿಯ ಸ್ನೇಹಿತ ನವೀನ್ ಜೊತೆ ಪರಾರಿಯಾಗಿದ್ದಾಳೆ. ನಿತೇಶ್ ಹಾಗೂ ನವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ, ಸ್ನೇಹಿತರಾಗಿದ್ದರು. ಮದುವೆ ಆದ ಬಳಿಕ ನವೀನ್ ಮನೆಯಲ್ಲಿ ನಿತೇಶ್ ದಂಪತಿ ಬಾಡಿಗೆಗೆ ವಾಸವಿದ್ದರು. ಈ ವೇಳೆ ಪತ್ನಿ ಪತಿಯಿಂದ ಕದ್ದುಮುಚ್ಚಿ ನವೀನ್‌ಗೆ ಕರೆ ಮಾಡೋದು, ಆತನನ ನಂಬರ್‌ನ್ನು ಹುಡುಗಿಯರ ಹೆಸರಲ್ಲಿ ಸೇವ್ ಮಾಡುತ್ತಿದ್ದಳು. ವಿಷಯ ತಿಳಿದ ನಿತೇಶ್ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ.
ಇದೆಲ್ಲದರಿಂದ ಬೇಸತ್ತ ಪತಿ ಕೊನೆಗೆ ಬನಶಂಕರಿಯ ಬೇರೊಂದು ಮನೆಗೆ ಬಾಡಿಗೆಗೆ ಶಿಫ್ಟ್ ಆಗಿದ್ದ. ಆದರೂ ಹಳೆ ಚಾಳಿ ಬಿಡದ ಪತ್ನಿ ನವೀನ್ ಜೊತೆ ಚಾಟಿಂಗ್ ಮಾಡುತ್ತಿದ್ದಳು. ಈ ವೇಳೆ ಪತಿ ವಾರ್ನಿಂಗ್ ಮಾಡಿದ್ದ. ಅದಕ್ಕೆ ಪತ್ನಿ ಅವನು ನನ್ನ ಅಣ್ಣನ ಸಮಾನ ಎಂದ್ದಿದ್ದಳು, ಇದೀಗ ಅವನ ಜೊತೆಯೇ ಓಡಿಹೋಗಿದ್ದಾಳೆ. 3 ದಿನದ ಹಿಂದೆ ಬ್ಯಾಗ್ ಪ್ಯಾಕ್ ಮಾಡಿ, ಕಂಪನಿಯಲ್ಲಿ ಹೊಟ್ಟೆ ನೋವೆಂದು ಅರ್ಧದಿನ ರಜೆ ಪಡೆದು ಪರಾರಿಯಾಗಿದ್ದಾಳೆ.
