ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಮತ್ತೆ ಜನಿವಾರ ದಂಗಲ್ ಶುರುವಾಗಿದೆ, ನಡೆದ ಸಿಇಟಿ ಪರೀಕ್ಷೆಯಲ್ಲಿ 5ಕ್ಕೂ ಅಧಿಕ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಕೇಳಿಬಂದಿದೆ. ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಆನಂದ್ ಸುಧೀರ್ ರಾವ್ ಎಂಬ ವಿದ್ಯಾರ್ಥಿ ಸೇರಿದಂತೆ ಐದಕ್ಕೂ ಹೆಚ್ಚು ಮಕ್ಕಳ ಜನಿವಾರ ತೆಗೆಸಿದ್ದಾರೆ. ಈ ವೇಳೆ ವಿದ್ಯಾರ್ಥಿ ತಗೆಯಲ್ಲ ಅಂತ ಹೇಳಿದಕ್ಕೆ ಮನೆಗೆ ವಾಪಸ್ ಹೋಗಿ ಅಂದಿದ್ದಾರೆ. ಅದಕ್ಕೆ ಕೊನೆಗೆ ಪೋಷಕರು ಮಗನ ಭವಿಷ್ಯದ ದೃಷ್ಠಿಯಿಂದ ಜನಿವಾರ ತಗೆದು ಪರೀಕ್ಷೆ ಕೇಂದ್ರಕ್ಕೆ ಕಳಸಿದ್ದಾರೆ. ವಿವಾದವಾದ ಬೆನ್ನಲ್ಲೇ ಇದರ ಬೆನ್ನಲ್ಲೇ ಕಾಲೇಜಿಗೆ ತಹಶೀಲ್ದಾರ್, ಶಿಕ್ಷಣಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಷಕರ ಮನವೊಲಿಸಿ ಎಲ್ಲೂ ಈ ಬಗ್ಗೆ ಹೇಳದ್ದಂತೆ ಒತ್ತಾಯ ಮಾಡಿ ಲೆಟರ್ ಹಾಕಿಸಿಕೊಂಡಿದ್ದರು. ಇಂದು ಅದೇ ಕಾಲೇಜು ಸಿಬ್ಬಂದಿ ಪೋಷಕರಿಗೆ ಕ್ಷಮೆ ಕೇಳಿ, ಜನಿವಾರ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇಂದು ಪರೀಕ್ಷಾ ಕೇಂದ್ರಕ್ಕೆ ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ.ಸಿ. ಸುಧಾಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರೆಸ್ ಕೋಡ್ ಬಗ್ಗೆ ಅರಿವು ಮೂಡಿಸಲಾಗಿದೆ. ವೆಬ್‌ಸೈಟ್‌ನಲ್ಲಿ ವಸ್ತ್ರಸಂಹಿತೆ ಬಗ್ಗೆ ಮಾಹಿತಿ ಕೊಡಲಾಗಿದೆ. ಸಣ್ಣಪುಟ್ಟ ಘಟನೆ ಮೂಗುತಿ ವಿಚಾರ ಅನಿವಾರ್ಯ ಸ್ಥಿತಿಯಲ್ಲಿ ಆಗಿದೆ. ಕೃಪನಿಧಿ ಕಾಲೇಜ್ ವಿಚಾರ ಕೆಇಎ ಗಮನಕ್ಕೆ ಬಂದಿಲ್ಲ. ಆ ರೀತಿ ಆಗಿದ್ದರೆ, ಕೇಂದ್ರದ ಸಿಬ್ಬಂದಿ ಹಾಗೆ ಮಾಡಿದ್ರೆ ವರದಿ ಪಡೆದು ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!