ಉದಯವಾಹಿನಿ, ಹುಬ್ಬಳ್ಳಿ: ವಿಡಿಯೋ ಗೇಮ್ ಆಡಲು ಮೊಬೈಲ್ ಕೊಡದೇ ಇದ್ದಿದ್ದಕ್ಕೆ ಬಾಲಕ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಉದಯನಗರ ನಿವಾಸಿ ಸಮರ್ಥ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ. ಮೃತ ಸಮರ್ಥ ಮೊಬೈಲ್‌ನಲ್ಲಿ ಪ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ. ಯಾವಾಗಲೂ ಇದೆ ಗೇಮ್ ಆಡುತ್ತ ಸಮಯ ಕಳೆಯುತ್ತಿದ್ದ. ಇದೇ ಕಾರಣಕ್ಕೆ ಆತನ ತಾಯಿ ಮೊಬೈಲ್ ಕಸಿದುಕೊಂಡು ಗೇಮ್ ಆಡದಂತೆ ಬುದ್ಧಿವಾದ ಹೇಳಿದ್ದರು. ತಾಯಿ ಮಾತಿನಿಂದ ಮನನೊಂದಿದ್ದ ಬಾಲಕ ಮನೆಯ ಕೋಣೆಗೆ ಹೋಗಿ, ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
