ಉದಯವಾಹಿನಿ, ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬೆನ್ನೆಲುಬಾಗಿ ನಿಂತ ಮುಸ್ಲಿಂ ಸಮುದಾಯದವನ್ನು ಈಗ ನಡುನೀರಿನಲ್ಲಿ ಕೈಬಿಡಲಾಗುತ್ತಿದೆ ಎಂದು ಮಂಡ್ಯದ ಮುಸ್ಲಿಂ ಧರ್ಮಗುರುಗಳು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಮತ್ತು ಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್ ಅವರ ವಜಾ ನಿರ್ಧಾರದ ವಿರುದ್ಧ ಮಂಡ್ಯದ ಜಾಮಿಯಾ ಮಸೀದಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರು ಅಬ್ದುಲ್ ಖದೀರ್, ನಮಗೆ ಬೇರೆ ಆಯ್ಕೆಗಳಿವೆ. ಮುಸ್ಲಿಂ ಸಮುದಾಯ 90% ಮತಗಳನ್ನು ಕಾಂಗ್ರೆಸ್‌ಗೆ ಹಾಕಿದೆ. ನಾವು ಎಲ್ಲೂ ಹೋಗಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ನಮಗೆ ಬೇರೆ ಪಕ್ಷಗಳ ಆಯ್ಕೆಯೂ ಇದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು. ನಿಮ್ಮನ್ನು ಹಗಲಿರುಳು ಕೆಲಸ ಮಾಡಿ ಅಧಿಕಾರದ ಕುರ್ಚಿಯ ಮೇಲೆ ಕೂರಿಸಿದವರು ನಾವು. ಅದೇ ನಮಗೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದು ತಿಳಿದಿದೆ. ನಜೀರ್ ಅಹಮ್ಮದ್ ಅವರನ್ನು ವಜಾ ಮಾಡುವ ಮೊದಲು ಕನಿಷ್ಠ ಒಂದು ನೋಟಿಸ್ ಕೂಡ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದೆ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!