ಉದಯವಾಹಿನಿ, ವಾಷಿಂಗ್ಟನ್‌: ಕಂಪನಿಗಳ ಅಧಿಕಾರಿಗಳು ಇನ್ಸೈಡರ್ ಟ್ರೇಡಿಂಗ್ ಮಾಡಿ ಸಿಕ್ಕಿ ಬಿದ್ದ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಸೈನಿಕ ʼಮಿಲಿಟರಿ ಇನ್ಸೈಡರ್ ಟ್ರೇಡಿಂಗ್ʼ ಮಾಡಿ ಬಂಧನಕ್ಕೊಳಗಾಗಿದ್ದಾನೆ.ಹೌದು. ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನ ಮತ್ತು ಅದಕ್ಕೆ ಸಂಬಂಧಿಸಿದ ಬೆಟ್ಟಿಂಗ್ ಹಗರಣದಲ್ಲಿ ಅಮೆರಿಕದ ಸೈನಿಕನನ್ನು ಬಂಧನ ಮಾಡಲಾಗಿದೆ.
ಅಮೆರಿಕದ ವಿಶೇಷ ಪಡೆಗಳ ಮಾಸ್ಟರ್ ಸರ್ಜೆಂಟ್ ಗ್ಯಾನನ್ ಕೆನ್ ವ್ಯಾನ್ ಡೈಕ್‌ನನ್ನು ಏಪ್ರಿಲ್‌ 23 ರಂದು ಬಂಧಿಸಲಾಗಿದೆ. ಮಡುರೊ ಅವರನ್ನು ಸೆರೆಹಿಡಿಯಲು ನಡೆದ ‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಎಂಬ ರಹಸ್ಯ ಮಿಲಿಟರಿ ಕಾರ್ಯಾಚರಣೆಯ ಯೋಜನೆಯಲ್ಲಿ ವ್ಯಾನ್ ಡೈಕ್ ಭಾಗಿಯಾಗಿದ್ದ.
ಈ ಕಾರ್ಯಾಚರಣೆಯ ರಹಸ್ಯ ಮಾಹಿತಿಯನ್ನು ಬಳಸಿಕೊಂಡು ವ್ಯಾನ್ ಡೈಕ್ ಪಾಲಿಮಾರ್ಕೆಟ್ ವೇದಿಕೆಯಲ್ಲಿ ಸುಮಾರು 27 ಲಕ್ಷ ರೂ. (33,000 ಡಾಲರ್‌) ಬಾಜಿ ಕಟ್ಟಿದ್ದ. ಜನವರಿ 3 ರಂದು ಮಡುರೊ ಬಂಧನವಾದ ನಂತರ ಈತ ಸುಮಾರು 3.4 ಕೋಟಿ ರೂ.ಗೂ ಅಧಿಕ (4.09 ಲಕ್ಷ ಡಾಲರ್‌) ಲಾಭ ಗಳಿಸಿದ್ದ.

Leave a Reply

Your email address will not be published. Required fields are marked *

error: Content is protected !!