ಉದಯವಾಹಿನಿ, ಟೆಹ್ರಾನ್ (ಇರಾನ್): ಸಂಘರ್ಷದ ಆರಂಭದಿಂದ ಇರಾನ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಿದ್ದು, 57 ದಿನಗಳಾದರೂ ಇಲ್ಲಿನ ನಾಗರಿಕರ ಅಂತರ್ಜಾಲ ಸೇವೆ ಹೊಂದಲು ಸಾಧ್ಯವಾಗಿಲ್ಲ. ಇರಾನ್ ಆಡಳಿತದಲ್ಲಿ 8 ವಾರಗಳಿಂದ ಡಿಜಿಟಲ್ ಸೇವೆ ಅಮಾನತು ಮಾಡಲಾಗಿದೆ ಇಂಟರ್ನೆಟ್ ಮೇಲ್ವಿಚಾರಣೆ ನೆಟ್ಬ್ಲಾಕ್ ವರದಿ ಮಾಡಿದೆ. ಸದ್ಯದ ಪರಿಸ್ಥಿತಿ ಕುರಿತು ವರದಿ ಮಾಡಿರುವ ವಾಚ್ಡಾಗ್, ಅಂತರ್ಜಾಲ ಸೇವೆ ನಿರ್ಬಂಧವೂ ಹೆಚ್ಚಿನ ಪರಿಣಾಮ ಬೀರಿದ್ದು, 1344 ಗಂಟೆಗಳ ಬಳಿಕ 57ನೇ ದಿನವೂ ಮುಂದುವರೆದಿದೆ. ಇದರಿಂದಾಗಿ ಇರಾಮಿಯನ್ನರು ತಮ್ಮ ಕುಟುಂಬ, ಸ್ನೇಹಿತರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇದು ಆರ್ಥಿಕತೆ ಮೇಲೆ ಹಾನಿ ಮಾಡಿದೆ ಎಂದು ಹೇಳಿದ್ದಾರೆ.
ಫೆ. 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ಸೇನಾ ದಾಳಿ ಆರಂಭಿಸಿದಾಗಿನಿಂದ ಈ ದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ರದ್ದು ಮಾಡಲಾಗಿದೆ. ಈ ದೀರ್ಘಾವಧಿಯ ಇಂಟರ್ನೆಟ್ ಬಂದ್ ಪ್ರಾದೇಶಿಕ ಅಸ್ಥಿರತೆ ಸಮಯದಲ್ಲಿ ಇರಾನಿ ಜನರನ್ನು ಜಾಗತಿಕ ಸಮುದಾಯದಿಂದ ಪ್ರತ್ಯೇಕಗೊಳಿಸಿದೆ. ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇಷ್ಟು ದಿನಗಳ ಕಾಲ ದೊಡ್ಡ ಮಟ್ಟದ ಇಂಟರ್ನೆಟ್ ಸೇವೆ ಬಂದ್ ಆಗಿರಲಿಲ್ಲ. ಇರಾನ್ನಲ್ಲಿನ ಅಧಿಕ ಕಾಲದ ಸೇವೆಯಲ್ಲಿ ಅಡೆಚಣೆಯಾಗಿದೆ. ಈ ಅಡಚಣೆಯ ಪ್ರಮಾಣವು ಮಾಹಿತಿಯ ಹರಿವನ್ನು ನಿಯಂತ್ರಿಸಲು ಹಿಂದಿನ ರಾಜ್ಯ ನೇತೃತ್ವದ ಪ್ರಯತ್ನಗಳನ್ನು ಮೀರಿಸುತ್ತದೆ ಎಂದಿದೆ. ಈ ಪ್ರಸ್ತುತ ನಿರ್ಬಂಧವು ಜನವರಿಯಲ್ಲಿ ಇರಾನ್ ಆಡಳಿತವು ವಿಧಿಸಿದ ಪ್ರತ್ಯೇಕ ಇಂಟರ್ನೆಟ್ ಮತ್ತು ಸಂವಹನ ನಿರ್ಬಂಧವನ್ನು ಅನುಸರಿಸುತ್ತದೆ. ಸುಮಾರು 47 ವರ್ಷಗಳ ಹಿಂದೆ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ ತನ್ನದೇ ನಾಗರಿಕರ ಮೇಲೆ ರಾಜ್ಯವು ನಡೆಸಿದ ಅತ್ಯಂತ ಭೀಕರ ದಮನದ ಪುರಾವೆಗಳನ್ನು ಮರೆಮಾಚಲು ಇದನ್ನು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ದೇಶಿಯ ಪ್ರತ್ಯೇಕೀಕರಣದ ನಡುವೆ ಇರಾನಿ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಸ್ಲಾಬಾದ್ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ರನ್ನು ಭೇಟಿಯಾಗಿದ್ದಾರೆ. ಅಮೆರಿಕದ ಜೊತೆಗಿನ ದ್ವಿಪಕ್ಷೀಯ ರಾಜತಾಂತ್ರಿಕ ಗಡುವಿನ ನಡುವೆ ಈ ಭೇಟಿ ನಡೆದಿದೆ. ಭಾರಿ ಬಿಗಿ ಭದ್ರತೆ ನಡುವೆ ಎರಡು ದೇಶಗಳ ನಾಯಕರ ಉನ್ನತ ಹಂತದ ಸಭೆ ಸಾಗಿದೆ. ಈ ನಡುವೆ ಶ್ವೇತಭವನ ಕೂಡ ರಾಯಭಾರಿ ಸ್ವೀವ್ ವಿಟ್ಕಾಫ್ ಮತ್ತು ಜರೇಡ್ ಕುಶ್ನರ್ ಕೂಡ ಈ ಪ್ರದೇಶದಲ್ಲಿ ಇರಾನ್ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಶ್ವೇತಭವನ ತಿಳಿಸಿದೆ. ಆದರೆ, ಟೆಹ್ರಾನ್ ಮಾತ್ರ ಅಮೆರಿಕದ ಜೊತೆ ನೇರವಾಗಿ ಯಾವುದೇ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
