ಉದಯವಾಹಿನಿ, ವಾಷಿಂಗ್ಟನ್(ಯುಎಸ್‌ಎ)​: ಇಸ್ರೇಲ್​ ಮತ್ತು ಲೆಬನಾನ್​ ಮತ್ತೆ ಮೂರು ವಾರಗಳ ಕಾಲ ಕದನ ವಿರಾಮ ವಿಸ್ತರಣೆಗೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಇಸ್ರೇಲ್​, ಲೆಬನಾನ್​ ರಾಯಭಾರಿಗಳೊಂದಿಗೆ ಸಭೆ ನಡೆಸಿದ್ದು, ಈ ಸಭೆ ಅತ್ಯುತ್ತಮವಾಗಿ ನಡೆದಿದೆ ಎಂದು ಟ್ರಂಪ್​ ಹೇಳಿದ್ದಾರೆ. ದಶಕಗಳ ಬಳಿಕ ಲೆಬನಾನ್​ ಮತ್ತು ಇಸ್ರೇಲ್​ ಇದೇ ಮೊದಲ ಬಾರಿಗೆ ನೇರವಾಗಿ ರಾಜತಾಂತ್ರಿಕ ಮಾತುಕತೆ ನಡೆಸಿರುವುದು ಗಮನಾರ್ಹ.
ಕಳೆದ ಶುಕ್ರವಾರ ಆರಂಭಿಕ ಕದನ ವಿರಾಮ ಜಾರಿಗೆ ಬಂದ ನಂತರ ಎರಡೂ ಕಡೆಯಿಂದ ಅನೇಕ ಉಲ್ಲಂಘನೆಗಳು ನಡೆದಿದ್ದವು.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್​, ಮುಂದಿನ ದಿನಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. ಇಸ್ರೇಲ್​ ಮತ್ತು ಲೆಬನಾನ್​ ನಡುವಿನ ಆರಂಭಿಕ 10 ದಿನಗಳ ಕದನ ವಿರಾಮ ಸೋಮವಾರ ಮುಕ್ತಾಯಗೊಳ್ಳಬೇಕಿತ್ತು.

Leave a Reply

Your email address will not be published. Required fields are marked *

error: Content is protected !!