ಉದಯವಾಹಿನಿ, ಟೆಹ್ರಾನ್​ (ಇರಾನ್​): ಇರಾನ್​ ಮೇಲೆ ಪರಮಾಣು ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಟ್ರಂಪ್​ ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದ್ದಿದ್ದು, ತಾವು ಯಾವುದೇ ಅಣ್ವಸ್ತ್ರ ದಾಳಿ ಮಾಡುವುದಿಲ್ಲ ಎಂದಿದ್ದಾರೆ.ಶ್ವೇತಭವನದಲ್ಲಿ ಮಾತನಾಡಿದ ಅವರು, ನಾವು ಈಗಾಗಲೇ ಇರಾನ್​ ನಾಶ ಮಾಡಿದ್ದು, ಯಾಕಾಗಿ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡಬೇಕು. ಪರಮಾಣು ಶಸ್ತ್ರಾಸ್ತ್ರವನ್ನು ಬಳಸಲು ಯಾರಿಗೂ ಅನುಮತಿ ನೀಡಬಾರದು ಎಂದಿದ್ದಾರೆ. ಇರಾನ್ ಒಪ್ಪಂದಕ್ಕೆ ಒಪ್ಪುವವರೆಗೂ ಹಾರ್ಮುಜ್ ಜಲಸಂಧಿಯ ನಿಯಂತ್ರಣವನ್ನು ಅಮೆರಿಕ ಇಟ್ಟುಕೊಳ್ಳುತ್ತದೆ. ಅದರ ಮೇಲೆ ನಮಗೆ ಸಂಪೂರ್ಣ ನಿಯಂತ್ರಣವಿದೆ. ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಆತುರ ನಮಗಿಲ್ಲ.​ ಹಾರ್ಮುಜ್​ ಜಲಸಂಧಿಯಲ್ಲಿ ಸ್ಪೋಟಕಗಳನ್ನು ಹುದುಗಿಸುವ ಹಡಗುಗಳನ್ನು ಕಂಡರೆ ಗುಂಡಿನ ದಾಳಿ ನಡೆಸುವಂತೆ ಅಮೆರಿಕ ನೌಕಪಡೆಗೆ ಆದೇಶಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಲೆಬನಾನ್ ಕದನ ವಿರಾಮವನ್ನು ಮೂರು ವಾರಗಳ ಕಾಲ ವಿಸ್ತರಿಸಲು ಒಪ್ಪಿಕೊಂಡಿವೆ. ಇದು ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೇ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. ಲೆಬನಾನ್ ರಾಯಭಾರಿ ನಾಡಾ ಹಮಾದೆ ಮೊವಾದ್ ಮತ್ತು ಇಸ್ರೇಲ್ ರಾಯಭಾರಿ ಯೆಚಿಯಲ್ ಲೀಟರ್ ಸೇರಿದಂತೆ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದು, ಹೆಚ್ಚುವರಿ ಮೂರು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಗುಂಡಿನ ದಾಳಿ ಇಲ್ಲ , ಮುಂಬರುವ ವಾರಗಳಲ್ಲಿ ಎರಡೂ ರಾಷ್ಟ್ರಗಳ ನಾಯಕರು ವಾಷಿಂಗ್ಟನ್‌ಗೆ ಭೇಟಿ ನೀಡಬಹುದು ಎಂದು ಹೇಳಿದರು.

ಅಮೆರಿಕ ಗ್ರೀನ್​ ಸಿಗ್ನಲ್​ಗೆ ಕಾದು ಕುಳಿತಿದ್ದೇವೆ ಎಂದ ಇಸ್ರೇಲ್​: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಯುದ್ಧವನ್ನು ಪುನರಾರಂಭಿಸುವ ಮಾತನಾಡಿದ್ದಾರೆ. ಇರಾನ್ ಅನ್ನು ಶಿಲಾಯುಗದತ್ತ ಕೊಂಡೊಯ್ಯಲು ಅಮೆರಿಕದ ಹಸಿರು ನಿಶಾನೆಗೆ ಕಾದು ಕುಳಿತಿದ್ದೇವೆ. ಐಡಿಎಫ್ ರಕ್ಷಣೆ ಮತ್ತು ದಾಳಿ ಎರಡಕ್ಕೂ ಸಿದ್ಧವಾಗಿದೆ ಮತ್ತು ಗುರಿಗಳನ್ನು ಗುರುತಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಖಮೇನಿ ರಾಜವಂಶದ ನಿರ್ಮೂಲನೆ ಮಾಡಲು, ದೇಶದಲ್ಲಿನ ಪ್ರಮುಖ ಇಂಧನ ಮತ್ತು ವಿದ್ಯುತ್ ಸೌಲಭ್ಯಗಳನ್ನು ನಾಶಪಡಿಸುವ ಮೂಲಕ ರಾಷ್ಟ್ರೀಯ ಆರ್ಥಿಕ ಮೂಲಸೌಕರ್ಯವನ್ನು ಕಿತ್ತುಹಾಕುವ ಮೂಲಕ ಇರಾನ್ ಅನ್ನು ಕರಾಳ ಯುಗಕ್ಕೆ ತಳ್ಳಲು ಕಾದಿದ್ದೇವೆ ಎಂದರು. ಈ ಬಾರಿ ದಾಳಿ ಪುನರಾರಂಭವಾದಾಗ ಅದು ವಿಭಿನ್ನ ಮತ್ತು ಮಾರಕವಾಗಿರುತ್ತದೆ, ಇರಾನಿನ ಭಯೋತ್ಪಾದಕ ಆಡಳಿತವು ಈಗಾಗಲೇ ಅನುಭವಿಸಿರುವ ಭೀಕರ ದಾಳಿಗಳ ಬಳಿಕ ಮತ್ತೊಂದು ವಿನಾಶಕಾರಿ ದಾಳಿ ಎದುರಿಸಲಿದ್ದು, ಅದು ದೇಶದ ಅಡಿಪಾಯವನ್ನು ಅಲುಗಾಡಿಸಿ, ಕೆಡವುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!