ಉದಯವಾಹಿನಿ, ಇಸ್ಲಾಮಾಬಾದ್‌ : ಇತ್ತೀಚೆಗೆ ಶಾಲೆಗಳಲ್ಲಿ ಮಕ್ಕಳಿಗೆ ಸೃಜನಶೀಲ ಕೌಶಲ್ಯಗಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ‌. ವಸ್ತು ಪ್ರದರ್ಶನ, ವಿಜ್ಞಾನ ಮಾಡೆಲ್ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆಯಲಾಗುತ್ತದೆ. ಇದೀಗ ಪಾಕಿಸ್ತಾನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ವಾಂಸನೊಬ್ಬ ವಿಜ್ಞಾನವನ್ನು ಅಲ್ಲಗೆಳೆಯುವ ಹೇಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳ ದಾರಿಗೆಳೆಯುವ ಪ್ರಯತ್ನ ಮಾಡಿದ್ದಾನೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆತ ವಿದ್ಯಾರ್ಥಿಗಳ “ವಿಜ್ಞಾನ ಸುಳ್ಳು, ಭೂಮಿ ಚಲಿಸುವುದಿಲ್ಲ” ಎಂದು ಹೇಳಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನದ ವಿದ್ಯಾರ್ಥಿಯೊಬ್ಬ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ವಿವರಿಸುವ ಮಾದರಿಯನ್ನು ರಚಿಸಿದ್ದ. ಭೂಮಿಯು ಸೂರ್ಯನ ಸುತ್ತ ಹೇಗೆ ಚಲಿಸುತ್ತದೆ ಎಂಬುದನ್ನು ಆತ ಇತರ ವಿದ್ಯಾರ್ಥಿಗಳೊಗೆ ವಿವರಣೆ ನೀಡುತ್ತಿದ್ದ. ಆದರೆ ಇದನ್ನು ವೀಕ್ಷಿಸುತ್ತಿದ್ದ ಮೌಲಾನಾ (ಮುಸ್ಲಿಂ ವಿದ್ವಾಂಸ), ʼʼವಿಜ್ಞಾನ ಸುಳ್ಳು, ಭೂಮಿ ಚಲಿಸುವುದಿಲ್ಲʼʼ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!