ಉದಯವಾಹಿನಿ, ಉಕ್ರೇನ್‌ನ ಪ್ರಮುಖ ನಗರವಾದ ಡ್ರಿಪ್ರೊ ಮೇಲೆ ರಷ್ಯಾ ನಡೆಸಿದ ಭೀಕರ ಡೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ನಡೆದ ಈ ದಾಳಿಯು ನಗರದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ಸೇನೆಯು ರಾತ್ರಿಯಿಡೀ ಡ್ರಿಪ್ರೊ ಮತ್ತು ಅದರ ಸುತ್ತಮುತ್ತಲಿನ ಸಮುದಾಯಗಳ ಮೇಲೆ ಸತತವಾಗಿ ಸ್ಫೋಟಕಗಳನ್ನು ಮಳೆಗರೆದಿದೆ. ಈ ವಿನಾಶಕಾರಿ ದಾಳಿಯಿಂದಾಗಿ ನಗರದ ಹಲವು ಭಾಗಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಧ್ವಂಸಗೊಂಡ ಮನೆಯ ಅವಶೇಷಗಳ ಅಡಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ.
ಈ ಘಟನೆಯ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ, “ರಷ್ಯಾದ ಅಮಾನವೀಯ ದಾಳಿಯಿಂದ ಗ್ನಿಪ್ರೊ ನಗರ ತತ್ತರಿಸಿದೆ. ಸದ್ಯ 11 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಡ್ರಿಪ್ರೊ ಮಾತ್ರವಲ್ಲದೆ, ದಕ್ಷಿಣದ ಬಂದರು ನಗರವಾದ ಒಡೆಸಾ ಮೇಲೆಯೂ ರಷ್ಯಾ ಡೋನ್ ದಾಳಿ ನಡೆಸಿದೆ. ಇಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಯುದ್ಧ ಆರಂಭವಾದಾಗಿನಿಂದ ರಷ್ಯಾ ನಿರಂತರವಾಗಿ ಉಕ್ರೇನ್‌ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಿದ್ದು, ವಿಶ್ವದಾದ್ಯಂತ ತೀವ್ರ ಖಂಡನೆಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!