ಉದಯವಾಹಿನಿ, ಟೆಹ್ರಾನ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗಿನ ನೇರ ಮಾತುಕತೆಯನ್ನು ಇರಾನ್ ತಳ್ಳಿಹಾಕಿದೆ. ಯಾವುದೇ ರೀತಿಯ ಮಾತುಕತೆಗೆ ಹಾರ್ಮುಝ್ ಮೇಲಿನ ಅಮೆರಿಕದ ದಿಗಂಧನ ಕೊನೆಗೊಳ್ಳಬೇಕು ಎಂದು ಇರಾನ್ ಹೇಳಿದೆ.
ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಫೈ ಈ ಕುರಿತು ಪ್ರತಿಕ್ರಿಯಿಸಿದ್ದು, ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಅಧಿಕಾರಿಗಳೊಂದಿಗೆ ಯಾವುದೇ ನೇರ ಅಥವಾ ಯೋಜಿತ ಸಭೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇರಾನ್ ತನ್ನ ನಿರೀಕ್ಷೆಗಳು ಮತ್ತು ನಿಲುವುಗಳನ್ನು ಇಸ್ಲಾಮಾಬಾದ್ ಮೂಲಕ ಅಮೆರಿಕ ಪ್ರತಿನಿಧಿಗಳಿಗೆ ತಿಳಿಸಲಿದೆ ಎಂದು ಹೇಳಿದ್ದಾರೆ.
ಅಮೆರಿಕದೊಂದಿಗೆ ಮಾತುಕತೆ ವಿಚಾರದಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ ಎಂದು ವರದಿಯಾಗಿದೆ. ಮಾತುಕತೆಗೆ ಹಲವು ಷರತ್ತುಗಳನ್ನು ಇರಾನ್ ಮುಂದಿರಿಸಿದೆ. ಹಾರ್ಮುಝ್ನಲ್ಲಿ ನೌಕಾ ನಿರ್ಬಂಧವನ್ನು ತೆರವುಗೊಳಿಸುವುದು ಇರಾನ್‌ನ ಪ್ರಮುಖ ಷರತ್ತಾಗಿದೆ. ಈ ನಿರ್ಬಂಧವು ಮುಂದಿನ ದಿನಗಳಲ್ಲಿ ನೇರ ಮಾತುಕತೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
