ಉದಯವಾಹಿನಿ, ಭಾರತೀಯ ಮನೆಗಳಲ್ಲಿ ಬೆಲ್ಲವನ್ನು ವರ್ಷವಿಡೀ ವ್ಯಾಪಕವಾಗಿ ಬಳಸುತ್ತೇವೆ. ಸಾಂಪ್ರದಾಯಿಕ ಸಿಹಿತಿನಿಸುಗಳಿಗೆ ಬಳಸುವುದರಿಂದ ತೊಡಗಿ ಆಯುರ್ವೇದದಲ್ಲೂ ಬಳಕೆಯಾಗುತ್ತದೆ. ನೈಸರ್ಗಿಕವಾದ ಸಿಹಿಯು ಆರೋಗ್ಯದ ಲಾಭಗಳಿಗೆ ಜನಪ್ರಿಯವಾಗಿದೆ. ಆದರೆ ಜನಪ್ರಿಯತೆಯ ಜೊತೆಗೆ ಕಲಬೆರಕೆಯ ಆತಂಕಕ್ಕೂ ಕಾರಣವಾಗಿದೆ. ಬೆಲ್ಲವನ್ನು ಹೆಚ್ಚಾಗಿ ಸಕ್ಕರೆ, ಸೀಮೆಸುಣ್ಣದ ಪುಟಿ ಅಥವಾ ಅಡುಗೆ ಸೋಡಾಗಳೊಂದಿಗೆ ಬೆರೆಸಲಾಗುತ್ತದೆ. ಹೀಗಾಗಿ ಬೆಲ್ಲದ ಶುದ್ಧತೆ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದೀಗ ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ.

ಬೆಲ್ಲದ ಬೆಲೆ ಹೆಚ್ಚಿರುವ ಕಾರಣದಿಂದ ಮತ್ತು ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಕಲಬೆರಕೆ ಮಾಡಲಾಗುತ್ತದೆ. ರಚನೆ, ಬಣ್ಣ ಮತ್ತು ತೂಕ ಹೆಚ್ಚಿಸಲು ಅಗ್ಗದ ವಸ್ತುಗಳೊಂದಿಗೆ ಕಲಬೆರಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ಅಡುಗೆ ಸೋಡಾವನ್ನು (ಸೋಡಿಯಂ ಬೈಕಾರ್ಬೋನೇಟ್) ಕಲಬೆರಕೆ ಮಾಡಲಾಗುತ್ತದೆ. ಅಡುಗೆ ಸೋಡ ಬೆಲ್ಲದ ಚೂರುಗಳ ಹೊಳಪನ್ನು ಹೆಚ್ಚಿಸುತ್ತದೆ. ಆದರೆ ಬೆಲ್ಲದ ಪರಿಪೂರ್ಣತೆ ಮತ್ತು ರುಚಿಯನ್ನು ಬದಲಿಸುತ್ತದೆ. ಅಡುಗೆ ಸೋಡಾವನ್ನು ಬೆಲ್ಲದಲ್ಲಿ ಬೆರೆಸಿದ್ದಾರೆಯೇ ಎಂದು ತಿಳಿದುಕೊಳ್ಳಲು FSSAI ಸರಳವಾದ ಪರೀಕ್ಷೆಯನ್ನು ತಿಳಿಸಿದೆ. ಪರೀಕ್ಷೆಯ ವೀಡಿಯೋವನ್ನು FSSAI ‘ಎಕ್ಸ್ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಪ್ರಕಟಿಸಿದೆ.

Leave a Reply

Your email address will not be published. Required fields are marked *

error: Content is protected !!