
ಉದಯವಾಹಿನಿ, ಬೆಳಗಿನ ಉಪಹಾರವನ್ನು ಪಾಲಕ್ ಸೊಪ್ಪಿನಿಂದ ಆರಂಭಿಸುವುದು ಕರುಳಿನ ಆರೋಗ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಪಾಲಕ್ ಸೊಪ್ಪು ಆಂಟಿ ಆಕ್ಸಿಡಂಟ್‌ಗಳು ಮತ್ತು ಫೈಬರ್‌ಗಳಿಂದ ಸಮೃದ್ಧವಾಗಿದೆ. ಚೆನ್ನೈನ ಆಹಾರ ತಜ್ಞೆಯಾಗಿರುವ ವೈದ್ಯೆ ದೀಪಲಕ್ಷ್ಮಿ ಹೇಳುವ ಪ್ರಕಾರ, ಪಾಲಕ್ ಸೊಪ್ಪು ಸೇವನೆಯೊಂದಿಗೆ ದಿನವನ್ನು ಆರಂಭಿಸುವುದರಿಂದ ಅಧಿಕ ಜಲ ಮತ್ತು ಫೈಬರ್ ಅಂಶಗಳಿಂದಾಗಿ ಹೈಡೇಶನ್, ಡಿಟಾಕ್ಸಿಫಿಕೇಶನ್ ಮತ್ತು ಸುಧಾರಿತ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಪಾಲಕ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಪಾಲಕ್‌ನಲ್ಲಿ ಕಬ್ಬಿಣಂಶವಿರುವ ಕಾರಣ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಶಕ್ತಿ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ.
ಚೆನ್ನೈನ ಮತ್ತೊಬ್ಬ ಪೌಷ್ಠಿಕ ತಜ್ಞೆ ಮತ್ತು ಉಪನ್ಯಾಸಕಿ ಸಿವಿ ಐಶ್ವರ್ಯ ಹೇಳುವ ಪ್ರಕಾರ, “ಪಾಲಕ್ ಸೊಪ್ಪಿನಲ್ಲಿ ಆ್ಯಂಟಿ ಆಕ್ಸಿಡಂಟ್‌ಗಳಾದ ವಿಟಮಿನ್ ಸಿ, ಬೀಟಾ ಕೆರೋಟೀನ್ ಮತ್ತು ಲ್ಯೂಟಿನ್ ಇರುವ ಕಾರಣದಿಂದ ಆರೋಗ್ಯಕರ ಚರ್ಮ, ಬಲವಾದ ಕೂದಲು ಮತ್ತು ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಪಾಲಕ್‌ನಲ್ಲಿರುವ ನೈಟ್ರೇಟ್‌ಗಳು ರಕ್ತಪರಿಚಲನೆ ಸುಧಾರಿಸುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಪಾಲಕ್ ಸೊಪ್ಪಿನ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಮೂಳೆಯ ಬಲಕ್ಕೆ ಉತ್ತಮ. ಪಾಲಕ್‌ನಲ್ಲಿರುವ ಲ್ಯುಟೀನ್ ಮತ್ತು ಜಿಯಾಕ್ಸಂತಿನ್ ಅಂಶವು ದೃಷ್ಟಿಗೆ ಉತ್ತಮ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜನರೇಶನ್ ಅಪಾಯವನ್ನು ಕಡಿಮೆ ಮಾಡುತ್ತದೆ.”
