ಉದಯವಾಹಿನಿ, ಆನೆಕಲ್‌: ಕೃಷಿ ಹೊಂಡಕ್ಕೆ ಬಿದ್ದು ತಾಯಿ  ಮಗಳು ಸಾವನ್ನಪ್ಪಿದ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಲಾವಣ್ಯ (28), ಲಕ್ಷತಾ (8) ಎಂದು ಗುರುತಿಸಲಾಗಿದೆ. 2017ರಲ್ಲಿ ಗ್ರಾಮದ ಸಂಪತ್ ಜೊತೆಗೆ ಲಾವಣ್ಯ ವಿವಾಹವಾಗಿದ್ದರು. ಇನ್ನೂ ತಾಯಿ ಮಗಳ ಸಾವಿನ ವಿಚಾರವಾಗಿ ಮಹಿಳೆಯ ಪೋಷಕರು ಪತಿ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಹಿಳೆಯ ಪೋಷಕರು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!