ಉದಯವಾಹಿನಿ, ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ ಮರದ ಬಾಕ್ಸ್‌ಗೆ ಶವ ತುಂಬಿ ಸಿಮೆಂಟ್‌ನಲ್ಲಿ ಸೀಲ್‌ ಮಾಡಿದ ಪ್ರಕರಣ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಹತ್ಯೆಯ ಬಳಿಕ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿ ಪೊಲೀಸರಿಗೆ ದೂರು ನೀಡಿದ್ದ ಎಂದು ತಿಳಿದು ಬಂದಿದೆ.
ಹತ್ಯೆಯಾದ ಮಹಿಳೆಯನ್ನು ಶಿಲ್ಪಾ ಸಾಲ್ವಿ (39) ಎಂದು ಗುರುತಿಸಲಾಗಿದೆ. ಆಕೆಯ ಪತಿ ವಿಶಾಲ್ ಸಾಲ್ವಿ (40) ಹತ್ಯೆ ಆರೋಪಿಯಾಗಿದ್ದಾನೆ. ವೃತ್ತಿಯಲ್ಲಿ ಶಿಲ್ಪಾ ಆಹಾರ ತಜ್ಞೆಯಾಗಿದ್ದರು. ಆಕೆ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ಆತ ದೂರು ನೀಡಿದ್ದ. ಪೊಲೀಸರು ತನಿಖೆಗೆ ಇಳಿದಾಗ ಹಂತಕನ ಬಣ್ಣ ಬಯಲಾಗಿದೆ.
ಮನೆಯಲ್ಲಿ ವಶಪಡಿಸಿಕೊಂಡ ಕೈಬರಹದ ನೋಟ್‌ನಿಂದ ಪ್ರಕರಣಕ್ಕೆ ಟಿಸ್ಟ್‌ ಸಿಕ್ಕಿದೆ. ವಿಶಾಲ್ ನೋಟ್‌ನಲ್ಲಿ ʻನಾನು ಗಂಭಿರವಾದ ತಪ್ಪು ಮಾಡಿದ್ದೇನೆ. ಶಿಲ್ಪ ಈಗ ಜೀವಂತವಾಗಿಲ್ಲʼ ಎಂದು ಬರೆದಿದ್ದ. ಇದನ್ನು ಆತನ ಅಪ್ರಾಪ್ತ ಮಗ ಪೊಲೀಸರಿಗೆ ನೀಡಿದ್ದ. ಇದಾದ ಬಳಿಕ ಪೊಲೀಸರು ಕಾಣೆಯಾದ ಪ್ರಕರಣ ಬಿಟ್ಟು, ಕೊಲೆ ಶಂಕೆಯ ಮೇಲೆ ತನಿಖೆ ಆರಂಭಿಸಿದ್ದರು.

Leave a Reply

Your email address will not be published. Required fields are marked *

error: Content is protected !!