ಉದಯವಾಹಿನಿ, ಬೊಗೋಟಾ: ದಕ್ಷಿಣ ಕೊಲಂಬಿಯಾದಲ್ಲಿ ಶನಿವಾರ ಸಂಜೆ ಬಸ್ಸೆಂದರಲ್ಲಿ ಬಾಂಬ್ ಸ್ಫೋಟಿಸಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಮಕ್ಕಳು ಸೇರಿದಂತೆ ಇತರ 38 ಮಂದಿ ಗಾಯಗೊಂಡಿದ್ದಾರೆ.
ಪ್ರದೇಶದಲ್ಲಿ ಡ್ರಗ್ಸ್‌ ಜಾಲಗಳಿಗೆ ಸಂಬಂಧಿಸಿದ ಹಿಂಸಾಚಾರದ ಘಟನೆಗಳು ಉಲ್ಬಣಿಸಿರುವ ಸಂದರ್ಭದಲ್ಲೇ ಈ ಬಾಂಬ್‌ ಸ್ಫೋಟ ಸಂಭವಿಸಿದೆ. ಇದೊಂದು ಭಯೋತ್ಪಾದನಾ ಕೃತ್ಯವೆಂದು ಕೊಲಂಬಿಯಾದ ಸೇನಾ ವರಿಷ್ಠರು ಬಂಧಿಸಿದ್ದಾರೆ.
ಕಾಕವೊ ಪ್ರಾಂತದಲ್ಲಿರುವ ಕ್ಯಾಜಿಬಿಯೊ ಮುನ್ಸಿಪಾಲಿಟಿ ಪ್ರದೇಶದಲ್ಲಿರುವ ಪ್ಯಾನ್ ಆಮೆರಿಕನ್ ಹೆದ್ದಾರಿಯಲ್ಲಿ ಈ ಸ್ಫೋಟ ಸಂಭವಿಸಿದೆಯೆಂದು ಗವರ್ನರ್ ಒಟ್ಟಾವಿಯೋ ಗುಝಾನ್ ಅವರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಬಸ್‌ ಸಂಪೂರ್ಣ ಧ್ವಂಸಗೊಂಡಿದೆಯೆಂದವರು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಿಗಾಗಿ ಕೊಲಂಬಿಯಾ ಸರಕಾರವು ಗಾಢವಾದ ವಿಷಾದವನ್ನು ವ್ಯಕ್ತಪಡಿಸಿದೆ ಹಾಗೂ ಈ ದುಷ್ಕೃತ್ಯದ ಹಿಂದಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!