ಉದಯವಾಹಿನಿ, ರಾಯಚೂರು: ಮದುವೆ ಬ್ರೋಕರ್ ಹೆಸರಲ್ಲಿ ಹೆಣ್ಣು ತೊರಿಸುವುದಾಗಿ ಕರೆದು ಬೆದರಿಸಿ ಬೈಕ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ರಾಯಚೂರಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ದೊಡ್ಡಬಸವ ಸೆರೆ ಸಿಕ್ಕಿದ್ದಾನೆ. ಹೆಣ್ಣು ನೋಡಲು ಬೈಕ್‌ನಲ್ಲಿ ಬರುವವರಿಗೆ ಬೆದರಿಸಿ ಹಣ, ಬೈಕ್ ಕಸಿದುಕೊಳ್ಳುತ್ತಿದ್ದ. ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ಆರೋಪಿ ದೊಡ್ಡಬಸವನನ್ನ ಬಂಧಿಸಿರುವ ಪೊಲೀಸರು ಆರೋಪಿಯಿಂದ 8.40 ಲಕ್ಷ ರೂ. ಮೌಲ್ಯದ 14 ಬೈಕ್ ಗಳು ಜಪ್ತಿ ಮಾಡಿದ್ದಾರೆ. ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಮಾನ್ವಿ, ಬಳಗಾನೂರು ಸೇರಿ ಹಲವೆಡೆ ಕೃತ್ಯ ಎಸಗಿರುವ ಆರೋಪಿ ಮದುವೆಗೆ ಹೆಣ್ಣು ತೋರಿಸುವುದಾಗಿ ನಂಬಿಸಿ ಕರೆದು ಬೈಕ್, ಹಣ ವಸೂಲಿ ಮಾಡಿ ಪರಾರಿಯಾಗುತ್ತಿದ್ದ. ಕೊಪ್ಪಳ ಜಿಲ್ಲೆಯ ಶರಣಪ್ಪ ಎಂಬುವವರ ದೂರಿನ ಮೇರೆಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ‌ಸ್ನೇಹಿತ ಈಶಪ್ಪ ಜೊತೆಗೆ ‌ಕನ್ಯಾ ನೋಡಲು ಬಂದಿದ್ದ ಶರಣಪ್ಪ‌ನಿಗೆ ಚಾಕು ತೋರಿಸಿ ಬೈಕ್ ಕಿತ್ತುಕೊಂಡು ಖದೀಮ ದೊಡ್ಡ ಬಸವ ಪರಾರಿಯಾಗಿದ್ದ. ಖದೀಮನ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ಮಾಡಿದ ಕವಿತಾಳ ಪೊಲೀಸರು ದೊಡ್ಡ ಬಸವನನನ್ನ ಬಂಧಿಸಿದ್ದಾರೆ. ಆರೋಪಿಯ ಬಳಗಾನೂರು ಮನೆ ಮೇಲೆ ದಾಳಿ ಮಾಡಿದಾಗ ಗಿರಿವಿ ಇಡಲು ಸಂಗ್ರಹಿಸಿದ್ದ 14 ಬೈಕ್ ಗಳನ್ನ ‌ಜಪ್ತಿ ಮಾಡಲಾಗಿದೆ. ವಿಚಾರಣೆ ಬಳಿಕ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!