ಉದಯವಾಹಿನಿ, : ತಜ್ಞರ ಪ್ರಕಾರ, ಸೋರೆಕಾಯಿ ಕೇವಲ ಸರಳ ತರಕಾರಿಯಲ್ಲ, ಅದ್ಭುತ ಔಷಧಿಗಳ ಗಣಿ. ಇದರಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನ ತಂಪಾಗಿಸುತ್ತದೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಮಧುಮೇಹ ಇರುವವರಿಗೆ ಸೋರೆಕಾಯಿ ಒಂದು ಉತ್ತಮ ವರದಾನವಾಗಿದೆ. ಸೋರೆಕಾಯಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಇದನ್ನ ಸೇರಿಸಿಕೊಳ್ಳುವುದು ಉತ್ತಮ. ಇದು ಹಸಿವಿನ ನೋವನ್ನ ತ್ವರಿತವಾಗಿ ತಡೆಯುತ್ತದೆ. ಸೋರೆಕಾಯಿ ರಕ್ತದೊತ್ತಡವನ್ನ ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ.

ಸೋರೆಕಾಯಿ ರಸವನ್ನ ಸ್ವಲ್ಪ ಎಳ್ಳೆಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚುವುದರಿಂದ ಶಾಂತಿಯುತವಾಗಿ ನಿದ್ರೆ ಬರುತ್ತದೆ ಅಂತಾ ತಜ್ಞರು ಹೇಳುತ್ತಾರೆ. ಇದು ದೇಹದಿಂದ ವಿಷವನ್ನ ಹೊರಹಾಕಲು ಸಹಾಯ ಮಾಡುತ್ತದೆ, ಚರ್ಮವನ್ನ ಕಾಂತಿಯುತವಾಗಿಸುತ್ತದೆ. ಇದು ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಕೃತಿಯಿಂದ ಬಂದ ಈ ಅಗ್ಗದ ಮತ್ತು ಆರೋಗ್ಯಕರ ತರಕಾರಿಯನ್ನ ನಿಯಮಿತವಾಗಿ ಸೇವಿಸುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಬಯಸುವವರು ನಿಯಮಿತವಾಗಿ ತಮ್ಮ ಊಟದಲ್ಲಿ ಇದನ್ನ ಸೇರಿಸಿಕೊಳ್ಳುವುದು ಉತ್ತಮ.

ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಸೋರೆಕಾಯಿ ರಸವು ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನ ಶುದ್ಧಗೊಳಿಸುತ್ತದೆ. ಇದು ಮಲಬದ್ಧತೆ, ಆಮ್ಲೀಯತೆ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನ ತಡೆಯುತ್ತದೆ. ಅಲ್ಲದೆ ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನ ನಿಯಂತ್ರಣದಲ್ಲಿಡುತ್ತದೆ. ಹೀಗಾಗಿ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!