ಉದಯವಾಹಿನಿ, ಮುಂಬೈ, ಬಾ ಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಸಿನಿಮಾಕ್ಕೆ ಬರುವ ಮುನ್ನವೇ ಸಾಮಾಜಿಕ ಜಾಲತಾಣಗಳ ಮೂಲಕ ಕ್ರೇಜ್ ಗಳಿಸುತ್ತಿದ್ದಾರೆ. ಸ್ಟಾರ್ ಕಿಡ್ ಖ್ಯಾತಿಯೊಂದಿಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹವಾ ಸೃಷ್ಟಿಸುತ್ತಾರೆ. ಈ ಸಾಲಿಗೆ ನಟಿ ಸಾರಾ ಅಲಿ ಖಾನ್ ಸೇರಿದ್ದಾರೆ. ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ವಾರಸುದಾರರಾಗಿ, ಸಾರಾ ಅಲಿ ಖಾನ್ ಸಾಮಾಜಿಕ ಮಾಧ್ಯಮ ಮತ್ತು ಚಲನಚಿತ್ರಗಳ ಮೂಲಕ ಖ್ಯಾತಿಯನ್ನು ಗಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಸಾಗಿಸುತ್ತಿದ್ದಾರೆ. ಇದೀಗ ಆಕೆ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ.

