ಉದಯವಾಹಿನಿ, ಭುವನೇಶ್ವರ: ಸರಕು ಸಾಗಣೆ ರೈಲು ಹಳಿ ಸಾಗುತ್ತಿದ್ದ ವೇಳೆ ಬಂಡೆಕಲ್ಲುಗಳು ಹಳಿಯ ಮೇಲೆ ಬಿದ್ದಿದ್ದು, ರೈಲಿನ ಹಳಿ ತಪ್ಪಿರುವ ಘಟನೆ ಅಂಗೋಲ್ ಜಿಲ್ಲೆಯ ಬಿಂದಾ ಬಳಿ ನಡೆದಿದೆ. ತಾಲ್ಚೇರ್‌ನಿಂದ ಸಂಬಲ್‌ಪುರಕ್ಕೆ ತೆರಳುತ್ತಿದ್ದಾಗ ಸರಕು ಸಾಗಣೆ ರೈಲಿನ ಇಂಜಿನ್ ಮೇಲೆ ಬೃಹತ್ ಆಕಾರದ ಕಲ್ಲುಗಳು ಬಿದ್ದು ರೈಲು ಎಂಜಿನ್ ಕೆಟ್ಟು ಹೋಗಿ,ಹಳಿ ತಪ್ಪಿದೆ. ಈ ವೇಳೆ ರೈಲ್ವೇ ಸಿಬ್ಬಂದಿ ಸುರಕ್ಷಿತವಾಗಿದ್ದು, ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮತ್ತೊಂ
ದೆಡೆ, ಸಂಬಲ್‌ಪುರ ಮತ್ತು ಅನುಗೋಲ್ ನಡುವಿನ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಸಂಬಲ್‌ಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ: ಧಾರಾಕಾರ ಮಳೆಗೆ ಪಶ್ಚಿಮ ಒಡಿಶಾದವರೆಗೆ ಎಲ್ಲೆಡೆ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಕಿಯೋಂಜಾರ್, ಬಲಂಗೀರ್, ಬಾಲೇಶ್ವರ, ನುವಾಪಾದ, ಕಲಹಂಡಿ, ಸುವರ್ಣಪುರ, ನಯಾಗಢ, ಸಂಬಲ್‌ಪುರ್, ಮಯೂರ್‌ಭಂಜ್, ಧೆಂಕನಾಲ್ ಸೇರಿದಂತೆ ೧೧ ಜಿಲ್ಲೆಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನೂ ಮುಚ್ಚಲಾಗಿದೆ. ಧಾರಾಕಾರ ಮಳೆಯಿಂದಾಗಿ ಶಾಲೆ ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
