ಉದಯವಾಹಿನಿ, ಚೆನ್ನೈ (ತಮಿಳುನಾಡು): ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಚೆನ್ನೈನಲ್ಲಿರುವ ಟಿವಿಕೆ ಮುಖ್ಯಸ್ಥ ವಿಜಯ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ರಾಜ್ಯದ ಒಟ್ಟು 234 ಸ್ಥಾನಗಳಲ್ಲಿ ಟಿವಿಕೆ ಪ್ರಸ್ತುತ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ತ್ರಿಶಾ ಕೃಷ್ಣನ್ ತಮ್ಮ 43ನೇ ಹುಟ್ಟುಹಬ್ಬ ಹಿನ್ನೆಲೆ, ಇಂದು ಮುಂಜಾನೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿ ವೈಯಕ್ತಿಕವಾಗಿದ್ದರೂ, ವಿಜಯ್​ ಜೊತೆ ಲಿಂಕ್​ ಮಾಡಲಾಗುತ್ತಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ವಿಜಯ್​ ಗೆಲುವಿಗಾಗಿ ಈ ದೇವಸ್ಥಾನ ಭೇಟಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವದಂತಿ ಹರಡಲಾಗಿದೆ.

ತಿರುಪತಿ ಭೇಟಿ ಬೆನ್ನಲ್ಲೇ ಚೆನ್ನೈನಲ್ಲಿರುವ ವಿಜಯ್ ಮನೆಗೆ ತ್ರಿಶಾ ಕೃಷ್ಣನ್ ಆಗಮಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ವ್ಯಾಪಕವಾಗಿ ವೈರಲ್​ ಆಗಿದೆ.
ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿರುವ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ), ತಮಿಳುನಾಡು ಚುನಾವಣಾ ಫಲಿತಾಂಶದಲ್ಲಿ ಮುನ್ನೆಡೆ ಸಾಧಿಸಿದೆ. 234 ಸ್ಥಾನಗಳ ಪೈಕಿ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ಇನ್ನೂ, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ವಿಡಿಯೋದಲ್ಲಿ ನಟಿ ತ್ರಿಶಾ ಕೃಷ್ಣನ್, ಟಿವಿಕೆ ಮುಖ್ಯಸ್ಥ ವಿಜಯ್ ನಿವಾಸಕ್ಕೆ ಕಾರಿನಲ್ಲಿ ಬರುತ್ತಿರುವುದನ್ನು ತೋರಿಸಿದೆ. ಅವರ ಈ ಭೇಟಿ ಕುತೂಹಲವನ್ನು ಹುಟ್ಟುಹಾಕಿದೆ. ವಿಶೇಷವಾಗಿ, ಆರಂಭಿಕ ಟ್ರೆಂಡ್ಸ್ ವಿಜಯ್ ಅವರ ಪಕ್ಷದ ಗೆಲುವಿನ ಸಾಧ್ಯತೆಯನ್ನು ಸೂಚಿಸಿದಾಗ.
ರಾಜ್ಯದಲ್ಲಿ ಪಕ್ಷವು ತನ್ನ ಮುನ್ನಡೆಯನ್ನು ಮುಂದುವರಿಸುತ್ತಿದ್ದಂತೆ, ವಿಜಯ್ ಅವರ ಕುಟುಂಬ ಕೂಡಾ ಅವರ ನಿವಾಸದಲ್ಲಿ ಶಿಳ್ಳೆ ಹೊಡೆದು ಸಂಭ್ರಮಿಸಿತು. ಈ ವಿಡಿಯೋ ಕೂಡಾ ಸದ್ಯ ಸಖತ್​ ಸದ್ದು ಮಾಡಿದೆ.

Leave a Reply

Your email address will not be published. Required fields are marked *

error: Content is protected !!