ಉದಯವಾಹಿನಿ, ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್‌ರಿಂದ ಬಿಜೆಪಿಗೆ ಗೆಲುವಾಗಿದೆ ಎಂದು ಸಚಿವ ಸಂತೋಷ್ ಲಾಡ್ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.ಪಂಚರಾಜ್ಯ ಚುನಾವಣೆ ಮತ್ತು ಉಪ ಚುನಾವಣೆ ಫಲಿತಾಂಶದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ 2 ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಸರ್ಕಾರದ ಕಾರ್ಯಕ್ರಮ ಅದರ ಜೊತೆ ಕಾರ್ಯಕರ್ತರು, ಮುಖಂಡರ ಕೆಲಸದಿಂದ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಸರ್‌ಪ್ರೈಸ್ ಆಗಿರೋದು ತಮಿಳುನಾಡಿನಲ್ಲಿ ವಿಜಯ್ ಗೆಲುವು. 35% ಮತಗಳನ್ನು ಪಡೆದಿದ್ದಾರೆ. ವಿಜಯ್‌ಗೆ ಆಲ್ ದಿ ಬೆಸ್ಟ್. ಒಂದು ವರ್ಷದಲ್ಲಿ ಸಿಂಪಲ್ ಮೆಜಾರಿಟಿ ಬಂದಿದೆ. ವಿಜಯ್‌ಗೆ ಶುಭವಾಗಲಿ ಎಂದರು. ಟಿವಿಕೆ ಜೊತೆ ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಅಸ್ಸಾಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರಿಸ್ ಜ್ಞಾನೇಶ್ ಕುಮಾರ್ ಇದ್ದಾರೆ. ಅದರ ಬಗ್ಗೆ ಮಾಹಿತಿ ಕೊಡುತ್ತೇವೆ. ಪಶ್ಚಿಮ ಬಂಗಾಳ 90 ಲಕ್ಷ ವೋಟ್ ಡಿಲೀಟ್ ಮಾಡಿ, ಬೇಕಾದ ಕಡೆ ವೋಟ್ ಡಿಲೀಟ್ ಮಾಡಿದ್ದಾರೆ. ಟಿಎಂಸಿ ಸೋಲಿಸೋ ವ್ಯವಸ್ಥೆ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ಕೂಡಾ ಇತ್ತು. ಚುನಾವಣೆ ಆಯೋಗಕ್ಕೆ ಜ್ಞಾನೇಶ್ ಕುಮಾರ್ ಬಂದ ಮೇಲೆ ಬಿಜೆಪಿ ಗೆಲುವಿನ ಮಾರ್ಜಿನ್‌ಗಳನ್ನ ದಾಟಿಸುವ ಮುಂದಾಳತ್ವ ತೆಗೆದುಕೊಂಡಿದ್ದಾರೆ. ಕೆಲಸದ ಮೇಲೆ ವೋಟ್ ಕೇಳದೇ ಜ್ಞಾನೇಶ್ ಕುಮಾರ್ ಮೂಲಕ ಫ್ರಾಡ್ ಮಾಡಿ ಗೆದ್ದಿದ್ದಾರೆ. ಅವರಿಗೆ ಶುಭವಾಗಲಿ. ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *

error: Content is protected !!