ಉದಯವಾಹಿನಿ, ಮಳೆಹನಿಗಳು ನೆಲವನ್ನು ಸೋಕಿದ್ರೆ ಹಸಿರು ಹುಕ್ಕುತ್ತದೆ, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳು, ಮೈ ನೆರವೇರಿಸುವ ತಂಪುಗಾಳಿ, ಸುರಿವ ಸೋನೆ ಮಳೆ… ಪ್ರವಾಸಿಗರನ್ನ ಒಂದೆಡೆ ಕೂರಲು ಬಿಡೋದಿಲ್ಲ. ಕಾಂಕ್ರೀಟ್ ಕಾಡುಗಳ ನಡುವೆಯೂ ಮೂಡಿದ ಸುಂದರ ತಾಣ ಎಂಥವರನ್ನೂ ಕೈಬೀಸಿ ಕರೆಯುತ್ತದೆ. ಅಲ್ಲಿ ಜನಜಂಗುಳಿಯಿಲ್ಲ, ವೆಹಿಕಲ್‌ನ ಆರನ್ ಸೌಂಡುಗಳಂತೂ ಇಲ್ಲವೇ ಇಲ್ಲ, ಮೊಬೈಲ್ ರಿಂಗಣ ಕೇಳಿಸುವುದೇ ಇಲ್ಲ. ಹೊಸ ಹೊಸ ಅನುಭವ ಹೊಸ ಸಾಹಸಕ್ಕೆ ಅಣಿಯಾಗುವಂತೆ ಪ್ರೇರೇಪಿಸುತ್ತಲೇ ಇರುತ್ತದೆ. ಆದ್ರೆ ಬೇಸಿಗೆ ಪ್ರವಾಸ ಇದಕ್ಕೆ ತದ್ವಿರುದ್ಧ. ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂತೆಂದ್ರೆ ಹಳ್ಳಿಗೆ ಹೋಗಿ, ಅಜ್ಜ-ಅಜ್ಜಿ ಜೊತೆ ಕಾಲ ಕಳೆದು ನದಿ, ತೊರೆ ಸಿಕ್ಕರೆ ಒಂದೆರಡು ಮುಳುಗು ಹಾಕಿ, ತೋಟಗಳಲ್ಲಿ ಸುತ್ತುಹಾಕಿ ಬರುತ್ತಿದ್ದೆವು. ದೊಡ್ಡವರಾದಂತೆ ನಮ್ಮ ಯೋಚನೆ ಭಿನ್ನವಾಗುತ್ತಿತ್ತು. ಎಂತಹ ದುರ್ಗಮ ಕಾಡುಗಳಾದ್ರೂ ಸರಿ, ನದಿ ತೊರೆ ಜಲಪಾತಗಳಿದ್ದರೂ ಸರಿ ನೋಡಲೇಬೇಕು ಅನ್ನಿಸಿದ್ರೆ ತಕ್ಷಣವೇ ಪ್ರವಾಸ ಕೈಗೊಳ್ಳುತ್ತಿದ್ದ ನಮ್ಮ ಸ್ನೇಹಿತರ ತಂಡ ಈ ಬಾರಿ ಹೊರಟಿದ್ದು ಪರಿಚಯವೇ ಇಲ್ಲದಂತಹ ಥೈಲ್ಯಾಂಡ್‌ಗೆ.
ಹೌದು. ಥೈಲ್ಯಾಂಡ್ ಅತ್ಯಂತ ಸುಂದರವಾದ ದೇಶ. ಬೇಸಿಯಲ್ಲಿ ರಣಬಿಸಿಲು ಮೈಗೆ ಬೆಂಕಿಯಿಟ್ಟಂತಾಗುತ್ತದೆ ಅನ್ನೋದುಬಿಟ್ರೆ, ಈ ದೇಶದ ಪ್ರವಾಸಿ ಆಕರ್ಷಣೆಗೆ ಮರುಳಾಗದವರೇ ಇಲ್ಲ. ವಿಶ್ವದ ಅನೇಕ ಭಾಗದ ವಿದೇಶಿ ಸಾಹಸಿಗರು ಇಲ್ಲಿಗೆ ಬರುತ್ತಾರೆ. ಥೈಲ್ಯಾಂಡ್ ಎಲ್ಲಾ ವಯೋಮಾನದವರಿಗೂ ಬಹಳ ಪ್ರಿಯವಾದ ದೇಶ ಎಂದೇ ಹೇಳಬಹುದು. ಇಲ್ಲಿ ಮನರಂಜನೆಯಿಂದ ಹಿಡಿದು ಪ್ರಕೃತಿಯ ಅಸಾಧಾರಣ ದೃಶ್ಯಾವಳಿಗಳವರೆಗೆ ನೋಡಲು ಎರಡು ಕಣ್ಣು ಸಾಲದು, ವರ್ಣಿಸ
