ಉದಯವಾಹಿನಿ, ಪಿಸ್ತಾ ರುಚಿಕರವಾಗಿರುವುದರೊಂದಿಗೆ ಆರೋಗ್ಯ ಪ್ರಯೋಜನಗಳ ನಿಧಿಯಾಗಿದೆ. ಪ್ರೋಟೀನ್, ಫೈಬರ್ ಹಾಗೂ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಡ್ರೈಫ್ರೂಟ್ಸ್ ಎಲ್ಲಾ ವಯಸ್ಸಿನ ಜನರಿಗೆ ಅಪಾರ ಪ್ರಯೋಜನಕಾರಿಯಾಗಿದೆ. ಪಿಸ್ತಾ ವಿಟಮಿನ್ ಬಿ 6 ಹಾಗೂ ಪೊಟ್ಯಾಸಿಯಮ್‌ನಂತಹ ವ್ಯಾಪಕ ಶ್ರೇಣಿಯ ಜೀವಸತ್ವಗಳು ಹಾಗೂ ಖನಿಜಗಳಿಂದ ಕೂಡಿದೆ. ಇತ್ತೀಚಿನ ಅಧ್ಯಯನವು ನೀವು ಕಡಿಮೆ ಪೌಷ್ಟಿಕ ತಿಂಡಿಗಳನ್ನು ಪಿಸ್ತಾದೊಂದಿಗೆ ಬದಲಾಯಿಸಿದಾಗ ನಿಮ್ಮ ದೇಹವು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತದೆ. ನೀವು ಪ್ರತಿದಿನ ಪಿಸ್ತಾ ಸೇವಿಸಿದಾಗ ನಿಮ್ಮ ದೇಹದಲ್ಲಿ ನಿಖರವಾಗಿ ಯಾವ ಬದಲಾವಣೆಗಳು ಸಂಭವಿಸುತ್ತವೆ ಎಂಬುದರ ಬಗ್ಗೆ ಅರಿತುಕೊಳ್ಳೋಣ.
ಸಂಶೋಧಕರು, ವೈದ್ಯರು ಮತ್ತು ಆಹಾರ ತಜ್ಞರು ತಿಳಿಸುವ ಪ್ರಕಾರ, ಪಿಸ್ತಾವನ್ನು ಅಪಾರ ಆರೋಗ್ಯ ಪ್ರಯೋಜನಗಳನ್ನು ನೀಡುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸುತ್ತಾರೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಹಾಗೂ ಫೈಬರ್ ಇತರ ಡ್ರೈಫ್ರೂಟ್ಸ್ಗೆ ಹೋಲಿಸಿದರೆ ಪಿಸ್ತಾದಲ್ಲಿ ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಹೃದಯದ ಆರೋಗ್ಯ, ಅರಿವಿನ ಕಾರ್ಯ ಹಾಗೂ ತೂಕ ನಿರ್ವಹಣೆಗೆ ಇವು ಹೆಚ್ಚು ಪ್ರಯೋಜನಕಾರಿಯಾಗಿವೆ. ಇದಲ್ಲದೆ, ಇವು ದೃಷ್ಟಿ ಹಾಗೂ ಜೀರ್ಣಕ್ರಿಯೆ ಸುಧಾರಿಸಲು, ಮಧುಮೇಹ ನಿರ್ವಹಿಸಲು ಹಾಗೂ ಚರ್ಮದ ಆರೋಗ್ಯ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಪಿಸ್ತಾ ಸೇವಿಸಿದಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ?: ಆಹಾರ ತಜ್ಞರ ಪ್ರಕಾರ, ಪ್ರತಿದಿನ ಪಿಸ್ತಾ ಸೇವಿಸುವುದರಿಂದ ದೇಹಕ್ಕೆ ಹೇರಳವಾದ ಪೋಷಕಾಂಶಗಳು ದೊರೆಯುತ್ತವೆ ಹಾಗೂ ದೈಹಿಕ ಆರೋಗ್ಯದ ಒಟ್ಟಾರೆ ಸುಧಾರಣೆಗೆ ಕೊಡುಗೆ ನೀಡುತ್ತವೆ. ಪಿಸ್ತಾಗಳು ವಿವಿಧ ರೀತಿಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಪ್ರಾಥಮಿಕವಾಗಿ ಅರ್ಜಿನೈನ್ ಹಾಗೂ ಇತರ ಅಮೈನೋ ಆಮ್ಲಗಳು, ಆಹಾರದ ಫೈಬರ್, ಅಗತ್ಯ ಸೂಕ್ಷ್ಮ ಪೋಷಕಾಂಶಗಳು (ತಾಮ್ರ, ವಿಟಮಿನ್ ಬಿ 6, ಮ್ಯಾಂಗನೀಸ್, ಥಯಾಮಿನ್, ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಸತು), ಸಸ್ಯ ಸ್ಟೆರಾಲ್‌ಗಳು (ಸ್ಟಿಗ್ಮಾಸ್ಟೆರಾಲ್ ಹಾಗೂ ಕ್ಯಾಂಪೆಸ್ಟೆರಾಲ್), ಫೀನಾಲಿಕ್ ಸಂಯುಕ್ತಗಳು (ರೆಸ್ವೆರಾಟ್ರೊಲ್ ಮತ್ತು ಕ್ಯಾಟೆಚಿನ್‌ಗಳು) ಹಾಗೂ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು (ಪ್ರಧಾನವಾಗಿ ಒಲೀಕ್ ಆಮ್ಲ) ಒಳಗೊಂಡಿರುತ್ತದೆ. ಈ ಪೋಷಕಾಂಶಗಳು ಹೃದ್ರೋಗ, ಮಧುಮೇಹ, ಅಧಿಕ ತೂಕ ಅಥವಾ ಬೊಜ್ಜು, ಜಠರಗರುಳಿನ ಸಮಸ್ಯೆಗಳು ಹಾಗೂ ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತವೆ.
