ಉದಯವಾಹಿನಿ, ಕೊಪ್ಪಳ: ಬಿಜೆಪಿ ನಾಯಕರನ್ನ ಬ್ಲ್ಯಾಕ್‌ಮೇಲ್ ಮಾಡೋಕೆ ಮಾಡ್ತಿದ್ದಾರೆ, ಇದು ಅಭಿಮಾನೋತ್ಸವ ಅಲ್ಲ, ಬ್ಲ್ಯಾಕ್‌ಮೇಲೋತ್ಸವ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಭಿಮಾನೋತ್ಸವ ಮಾಡೋಕೆ ಏನ್ ಕೆಲಸ ಮಾಡಿದ್ದಾರೆ. 50 ವರ್ಷ ಒಳ್ಳೆಯ ಕೆಲಸ ಮಾಡಿದ್ದರೆ ಮಾಡಬೇಕು, ಅದಕ್ಕಿಂತ ನೂರು ಪಟ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಜೈಲಿಗೆ ಹೋಗಿದ್ರು. ಸಿದ್ದರಾಮಯ್ಯ ಜೊತೆ ಅಡ್ಜಸ್ಟ್ಮೆಂಟ್ ಇರೋದಕ್ಕೆ ಹೊರಗಿದ್ದಾರೆ. ಇಲ್ಲಾಂದ್ರೆ ಜೈಲಲ್ಲಿ ಇರ್ತಿದ್ದರು. ಇದೀಗ ಬಿಜೆಪಿ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಲು ಅಭಿಮಾನೋತ್ಸವ ಮಾಡ್ತಿದ್ದಾರೆ.

ನವೆಂಬರ್‌ಗೆ ವಿಜಯೇಂದ್ರನ ಅವಧಿ ಮುಗಿಯತ್ತೆ, ರಿನಿವಲ್ ಮಾಡಲು ಜನರಿಗೆ ತೋರಿಸೋಕೆ ಮಾಡ್ತಿದ್ದಾರೆ. ಯಡಿಯೂರಪ್ಪ ಲಿಂಗಾಯತರಿಗೆ ಏನ್ ಮಾಡಿದ್ದಾರೆ. ಲಿಂಗಾಯತರನ್ನ ಒಬಿಸಿ ಮಾಡ್ತೀವಿ ಅಂದಿದ್ರು, ನಾಲ್ಕು ಮಠಕ್ಕೆ ಅನುದಾನ ಕೊಟ್ಟರೆ ಏನಾಯ್ತು? ಸಿಎಂ ಆದವರು ಒಂದು ಜಾತಿಗೆ ಸೀಮಿತ ಆಗಬಾರದು, ಎಲ್ಲಾ ಜಾತಿಯ ಬಡವರ ಪರ ಕೆಲಸ ಮಾಡಬೇಕು. ಲಿಂಗಾಯತ ಮಠಗಳಿಗೂ 2, 3 ಕೋಟಿ ರೂ. ಕೊಟ್ಟಿದ್ದಾರೆ, ಅವರು ಬಹುಪರಾಕ್ ಅಂತಾರೆ. ಯಡಿಯೂರಪ್ಪ ಯಾವ ಅಭಿವೃದ್ಧಿ ಕೆಲಸನೂ ಮಾಡಿಲ್ಲ. ನಾಳೆ ನಡೆಯುವ ಕಾರ್ಯಕ್ರಮ ತನ್ನ ಮಕ್ಕಳ ಭವಿಷ್ಯಕ್ಕಾಗಿ ಅಷ್ಟೇ. ದೃತರಾಷ್ಟ್ರನ ಮುಂದೆ ದುರ್ಯೋದನನ ಪಟ್ಟ ಕಟ್ಟಲ್ಲಿಕ್ಕೆ ನಡೆಯುವ ಕಾರ್ಯಕ್ರಮವಿದು ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!