ಉದಯವಾಹಿನಿ, ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಧಿಸಿದ್ದ ಹೊಸ ಜಾಗತಿಕ ಸುಂಕವೂ ಸಹ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಈ ಸಂಬಂಧ ಹೂಡಲಾಗಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯೂಯಾರ್ಕ್​ನಲ್ಲಿರುವ ಅಂತಾರಾಷ್ಟ್ರೀಯ ವ್ಯಾಪಾರ ಕೋರ್ಟ್​ನ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದ್ದು, ಟ್ರಂಪ್​ ವಿಧಿಸಿದ್ದ ಶೇ 10ರಷ್ಟು ಜಾಗತಿ ಸುಂಕ, ಕಾನೂನು ಬಾಹಿರವಾಗಿದೆ ಎಂದು ಹೇಳಿದೆ.

ನ್ಯಾಯಾಲಯ 2-1 ಬಹುಮತದ ಆಧಾರದ ಮೇಲೆ ಆದೇಶ ನೀಡಿದ್ದು, ಟ್ರಂಪ್ ಸುಂಕದ ಅಧಿಕಾರವನ್ನು ಮೀರಿದ್ದಾರೆ. ಈ ಸುಂಕಗಳು ಅಸಮಂಜಸ ಮತ್ತು ಕಾನೂನು ಬದ್ಧವಾಗಿಲ್ಲ ಎಂದು ಬಹುಮತದ ಆದೇಶ ನೀಡಿದೆ. ಪೀಠದ ಮೂರನೇ ನ್ಯಾಯಮೂರ್ತಿಗಳು, ಸುಂಕ ಹೇರುವ ಅಧಿಕಾರ ಅಧ್ಯಕ್ಷರಿಗೆ ಇದೆ. ಅಧ್ಯಕ್ಷರಿಗೆ ಸುಂಕ ಹೇರುವ ಸ್ವಾತಂತ್ರ್ಯ ಕಾನೂನ ಪ್ರಕಾರ ಇದೆ ಎಂದು ತೀರ್ಪು ನೀಡಿದ್ದಾರೆ.

ನಿರೀಕ್ಷೆಯಂತೆ ಈ ತೀರ್ಪಿನ ವಿರುದ್ಧ ಆಡಳಿತವು ಮೇಲ್ಮನವಿ ಸಲ್ಲಿಸಿದರೆ, ಅದು ಮೊದಲು ವಾಷಿಂಗ್ಟನ್‌ನಲ್ಲಿರುವ ಅಮೆರಿಕದ ಫೆಡರಲ್ ಸರ್ಕ್ಯೂಟ್‌ನ ಮೇಲ್ಮನವಿ ನ್ಯಾಯಾಲಯಕ್ಕೆ ಬಳಿಕ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಸುಪ್ರೀಂಕೋರ್ಟ್ ಅಧ್ಯಕ್ಷರು ಕಳೆದ ವರ್ಷ ಟ್ರಂಪ್​ ಎಲ್ಲ ರಾಷ್ಟ್ರಗಳ ಮೇಲೆ ವಿಧಿಸಿದ್ದ ವ್ಯಾಪಕ ಟ್ಯಾರಿಫ್​ ಗಳನ್ನು ರದ್ದುಗೊಳಿಸಿತ್ತು. ಇದಾದ ನಂತರ ಟ್ರಂಪ್ ಆಡಳಿತವು, ವಿಶ್ವದ ಎಲ್ಲ ರಾಷ್ಟ್ರಗಳ ಮೇಲೆ ಶೇ 10 ರಷ್ಟು ಸುಂಕ ವಿಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವೂ ಸಹ ವಿವಾದಕ್ಕೆ ಈಡಾಗಿತ್ತು. 1974ರ ವ್ಯಾಪಾರ ಕಾಯ್ದೆ, ಸೆಕ್ಷನ್ 122ರ ಅಡಿಯಲ್ಲಿ ಅನ್ವಯಿಸಲಾದ ಹೊಸ ಸುಂಕಗಳು ಜುಲೈ 24ರಂದು ಮುಕ್ತಾಯಗೊಳ್ಳಲಿವೆ.
ಬೇಸಿಕ್​ ಫನ್​ ಸಿಇಒ ಮಾತನಾಡಿ, ನಾವು ಟ್ರಂಪ್​ ಅವರ ಸುಂಕದ ವಿರುದ್ದ ಮತ್ತೆ ಹೋರಾಡಿದ್ದು, ಇದು ತುಂಬಾ ಖುಷಿ ತಂದಿದೆ ​ಎಂದಿದ್ದಾರೆ. ಈ ಆದೇಶವು ಟ್ರಂಪ್​ ಆಡಳಿತಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (ಐಇಇಪಿಎ) ಕೂಡ ಸುಂಕವನ್ನು ಅಧಿಕೃತಗೊಳಿಸಿರಲಿಲ್ಲ. ಈ ಕುರಿತು ಆದೇಶ ನೀಡಿದ ಸುಪ್ರೀಂ ಕೋರ್ಟ್​ ಶಾಸಕರು ಸುಂಕದ ಅಧಿಕಾರವನ್ನು ಅಧ್ಯಕ್ಷರಿಗೆ ವಹಿಸಬಹುದಾದರೂ, ಅಮೆರಿಕದ ಸಂವಿಧಾನವು ಸುಂಕಗಳು ಸೇರಿದಂತೆ ತೆರಿಗೆಗಳನ್ನು ಸ್ಥಾಪಿಸುವ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡುತ್ತದೆ ಎಂದಿತ್ತು. ಈಗಾಗಲೇ ಜನವರಿಯಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿದ ಸುಂಕಗಳನ್ನು ಬದಲಾಯಿಸಲು ಟ್ರಂಪ್ ಈಗಾಗಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇದು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾರಣವಾಗಬಹುದು.

Leave a Reply

Your email address will not be published. Required fields are marked *

error: Content is protected !!