ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಕಮ್ಯುನಿಸ್ಟ್, ತೃಣಮೂಲ ಕಾಂಗ್ರೆಸ್ ಬಳಿಕ ಅಲ್ಲಿನ ಮತದಾರರು ಮೊದಲ ಬಾರಿ ಬಲಪಂಥೀಯ ಸರ್ಕಾರವನ್ನ ಆಯ್ಕೆ ಮಾಡಿದ್ದಾರೆ. ಫಲಿತಾಂಶದ ಬೆನ್ನಲ್ಲಿಯೇ ಒಂದು ಕಾಲದ ದೇಶದ ಸಾಂಸ್ಕೃತಿಕ ನೆಲದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ.
ಸುವೇಂದು ಅಧಿಕಾರಿ ಅವರೊಂದಿಗೆ ಇತರ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತನ್ಯ, ಕ್ಷುದಿರಂ ತಡು, ನಿಶಿತ್ ಪ್ರಾಮಾಣಿಕ್ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಿದರು ಯಾರು? ರಾಜಕೀಯ ಹಿನ್ನೆಲೆ ಏನು ಅನ್ನೋದ್ರ ಪಕ್ಷಿನೋಟ ಇಲ್ಲಿ ನೀಡಲಾಗಿದೆ.ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಹಿರಿಯ ನಾಯಕ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ರಾಜಕೀಯ ಜೀವನ ಶುರು ಮಾಡಿದರು. 2014 ರ ನಂತರ ಬಂಗಾಳದಲ್ಲಿ ತಳಮಟ್ಟದಿಂದಲೂ ಬಿಜೆಪಿ ಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ದಿಲೀಪ್‌ ಘೋಷ್‌ ಈ ಹಿಂದೆ ಮೇದಿನಿಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಬಂಗಾಳದಲ್ಲಿ ಬಿಜೆಪಿ ಉದಯಿಸಲು ಕಾರಣರಾದ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!