ಉದಯವಾಹಿನಿ, ನವದೆಹಲಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದರು. ಈ ನಡುವೆ ಮಾಜಿ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸದ್ದಿಲ್ಲದೇ ತಮ್ಮ ಬಯೋ ಅಪ್‌ಡೇಟ್ ಮಾಡಿದ್ದಾರೆ. ಇದು ಬಂಗಾಳದ ಬದಲಾಗುತ್ತಿರುವ ರಾಜಕೀಯ ಸಮೀಕರಣವನ್ನು ಸಂಕೇತಿಸುತ್ತಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ತಮ್ಮ ಎಕ್ಸ್ , ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿನ ವಿವರಣೆಯನ್ನು ಬದಲಾಯಿಸಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿ, ಪಶ್ಚಿಮ ಬಂಗಾಳ ಎಂಬ ಅಡಿ ಬರಹವನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (15, 16 ಮತ್ತು 17 ನೇ ವಿಧಾನಸಭೆ) ಎಂದು ಬದಲಾಯಿಸಿದ್ದಾರೆ.

ಮಮತಾ ಸಾಮಾಜಿಕ ಮಾಧ್ಯಮದ ಪ್ರೊಫೈಲ್​ನಲ್ಲಿ ಬದಲಾವಣೆ: 11 ಗಂಟೆವರೆಗೂ ಆಗಿರಲಿಲ್ಲ ಬದಲಾವಣೆ: ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಮತಾ ಅವರ ಎಕ್ಸ್ ಪ್ರೊಫೈಲ್ ನಲ್ಲಿ “ಗೌರವಾನ್ವಿತ ಮುಖ್ಯಮಂತ್ರಿ, ಪಶ್ಚಿಮ ಬಂಗಾಳ” ಎಂದು ಇತ್ತು. 2026 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ನಂತರ ಸುವೇಂದು ಅಧಿಕಾರಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ ಈ ಬದಲಾವಣೆ ಮಾಡಲಾಗಿದೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗಳಿಸಿದೆ. ರಾಜ್ಯದಲ್ಲಿ ಟಿಎಂಸಿಯ ನಿರಂತರ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಅಧಿಕಾರದ ಗದ್ದುಗೆ ಏರಿದೆ. 2011 ರಲ್ಲಿ ಎಡರಂಗದ 34 ವರ್ಷಗಳ ಆಡಳಿತವನ್ನು ಸೋಲಿಸುವ ಮೂಲಕ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ, ಅಂದಿನಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಪ್ರಬಲ ವಿಮರ್ಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

Leave a Reply

Your email address will not be published. Required fields are marked *

error: Content is protected !!