ಉದಯವಾಹಿನಿ, ಎಂವಿ ಹೊಂಡಿಯಸ್ ಪ್ರವಾಸಿ ಹಡಗಿಗೆ ಸಂಬಂಧಿಸಿದ ಹ್ಯಾಂಟಾ ವೈರಸ್ ಹರಡುವಿಕೆಯ ಸುದ್ದಿ ಚರ್ಚೆಯಲ್ಲಿರುವಾಗಲೇ, ಭವಿಷ್ಯದ ಹ್ಯಾಂಟಾ ವೈರಸ್ ಸಾಂಕ್ರಾಮಿಕದ ಬಗ್ಗೆ ಭವಿಷ್ಯ ನುಡಿದ ಕೆಲವು ವರ್ಷಗಳ ಹಿಂದಿನ ಸಾಮಾಜಿಕ ಮಾಧ್ಯಮದ ಪೋಸ್ಟ್ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ.
ಇದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಯ ಮತ್ತು ಊಹಾಪೋಹಗಳಿಗೆ ಕಾರಣವಾಗಿದ್ದು, ಇದು ಮೂಲತಃ 2022ರಲ್ಲಿ ಹಾಕಲಾಗಿದ್ದ ಈ ಟ್ವಿಟ್ ಈಗಿನ ಜಾಗತಿಕ ಕಳವಳದ ನಡುವೆ ವೈರಲ್ ಆಗಿದ್ದು, ಈ ಅಪರೂಪದ ವೈರಲ್ ಕಾಯಿಲೆಯ ಬಗ್ಗೆ ತಪ್ಪು ಮಾಹಿತಿಗಳು ಹರಡಲು ಕಾರಣವಾಗಿದೆ.
ಹಾಗಾದರೆ ಈ ಹ್ಯಾಂಟಾ ವೈರಸ್ ಎಂದರೇನು? ಅದು ಹೇಗೆ ಹಡುತ್ತದೆ, ಅದಕ್ಕೆ ಪರಿಹಾರವೇನು?
ಹ್ಯಾಂಟಾ ವೈರಸ್ ಮುಖ್ಯವಾಗಿ ಇಲಿ ಮತ್ತು ಹೆಗ್ಗಣಗಳ ಮೂಲಕ ಹರಡುವ ಒಂದು ಗಂಭೀರ ಕಾಯಿಲೆಯಾಗಿದೆ. ಇದು ಇಲಿ ಅಥವಾ ಹೆಗ್ಗಣಗಳ ಮೂತ್ರ, ಲಾಲಾರಸ ಅಥವಾ ಮಲದ ಸಂಪರ್ಕದಿಂದ ಹರಡುವ ವೈರಸ್. ಇದು ಮನುಷ್ಯರಲ್ಲಿ ಎರಡು ರೀತಿಯ ಗಂಭೀರ ಸಮಸ್ಯೆಗಳನ್ನು ತರಬಹುದು. ಮೊದಲನೆಯದು HPS ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇನ್ನೊಂದು HFRS ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸೋಂಕು ತಗುಲಿದ 1 ರಿಂದ 8 ವಾರಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೊದಲು ಜ್ವರ, ತೀವ್ರ ಸ್ನಾಯು ನೋವು, ಸುಸ್ತು, ತಲೆನೋವು ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಬಳಿಕ ಉಸಿರಾಟದ ತೊಂದರೆ, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಮತ್ತು ರಕ್ತದೊತ್ತಡ ಕಡಿಮೆಯಾಗುವುದು ಇಂತಹ ಗಂಭೀರ ಲಕ್ಷಣಗಳು ಕಾಣಿಕೊಳ್ಳುತ್ತದೆ.

Leave a Reply

Your email address will not be published. Required fields are marked *

error: Content is protected !!