ಉದಯವಾಹಿನಿ,  ಬಾಂಗ್ಲಾ ಪ್ರಿಮಿಯರ್ ಲೀಗ್‌ನಲ್ಲಿ ಹಲವು ಮಂದಿ ಆಟಗಾರರು, ತಂಡದ ಅಧಿಕಾರಿಗಳು, ಫ್ರಾಂಚೈಸಿ ಮಾಲೀಕರು ಮತ್ತು ಪಾಲ್ಗೊಂಡ ಇತರರು ಬಾಂಗ್ಲಾದೇಶ ಪ್ರಿಮಿಯರ್ ಲೀಗ್‌ನ 12ನೇ ಆವೃತ್ತಿಯಲ್ಲಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಹೇಳಿದೆ.
ಮಂಡಳಿಯ ಇಂಟೆಗ್ರಿಟಿ ಯುನಿಟ್ ಈ ಆರೋಪಗಳ ಬಗ್ಗೆ ತನಿಖೆ ನಡೆಸಿದ ಬಳಿಕ ದೂರು ದಾಖಲಿಸಲಾಗಿದೆ ಎಂದು ಬಿಸಿಬಿ ಸ್ಪಷ್ಟಪಡಿಸಿದೆ. ತನಿಖೆಯಲ್ಲಿ ಭ್ರಷ್ಟ ನಡತೆ, ಬೆಟ್ಟಿಂಗ್ ಚಟುವಟಿಕೆ, ಭ್ರಷ್ಟಾಚಾರ ವಿರೋಧಿ ತನಿಖೆಗೆ ಅಸಹಕಾರ ಮತ್ತು ತನಿಖಾಧಿಕಾರಿಗಳನ್ನು ಬಿಪಿಎಲ್‌ಗೆ ಸಂಬಂಧಿಸಿದ ತನಿಖೆಯಿಂದ ವಿಮುಖಗೊಳಿಸುವ ಪ್ರಯತ್ನದಂತಹ ಆರೋಪಗಳು ಹೊರಿಸಲಾಗಿದೆ ಎಂದು ಬಿಸಿಬಿ ಹೇಳಿಕೆಯಲ್ಲಿ ವಿವರಿಸಲಾಗಿದೆ. “ಬೆಟ್ಟಿಂಗ್ ಸಂಬಂಧಿತ ಚಟುವಟಿಕೆಗಳು, ಭ್ರಷ್ಟಾಚಾರ, ಸಂಹಿತೆಯ 4.3ನೇ ವಿಧಿಯಡಿ ನೀಡಿದ ಡಿಮ್ಯಾಂಡ್ ನೋಟಿಸ್‌ಗೆ ಉತ್ತರಿಸದೇ ಇರುವುದು, ಸಂಬಂಧಪಟ್ಟ ಸಂವಹನವನ್ನು ಮುಚ್ಚಿಹಾಕಿರುವುದು ಹಾಗೂ ಕಿತ್ತುಹಾಕಿರುವುದು, ನಿಯೋಜಿತ ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗೆ ಸಹಕಾರ ನೀಡದಿರುವುದು ಆರೋಪಗಳಲ್ಲಿ ಸೇರಿವೆ” ಎಂದು ತಿಳಿಸಿದೆ.
ತಂಡದ ವ್ಯವಸ್ಥಾಪಕ ಮೊಹ್ಮದ್ ಲಬ್ಲೂರ್ ರೆಹಮಾನ್ ಮತ್ತು ಫ್ರಾಂಚೈಸಿ ಸಹ ಮಾಲೀಕ ಮೊಹ್ಮದ್ ತೌಹೀದುಲ್ ಹಕ್ ತೌಹೀದ್ ವಿರುದ್ಧ ತನಿಖೆಗೆ ಸಹಕಾರ ನೀಡದ ಆರೋಪದಲ್ಲಿ ದೂರು ದಾಖಲಿಸಲಾಗಿದೆ. ದೇಶೀಯ ಆಟಗಾರ ಅಮಿತ್‌ ಮಜೂಂದಾ‌ರ್ ಮತ್ತು ತಂಡದ ವ್ಯವಸ್ಥಾಪಕ ರಿಜ್ವಾನ್ ಕಬೀರ್ ಸಿದ್ದಿಕಿ ವಿರುದ್ಧ ಬೆಟ್ಟಿಂಗ್ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಆಟಗಾರರು ಮತ್ತು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ 14 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!